ಮನೆ ಮನೆ ಮದ್ದು ದಾಲ್ಚಿನ್ನಿ

ದಾಲ್ಚಿನ್ನಿ

0

ದಾಲ್ಚಿನ್ನಿ ಯನ್ನು ಸ್ವಾದಿಷ್ಟ ಮಸಾಲೆಗಳಲ್ಲಿ ರುಚಿಕರ ಭೋಜನಗಳಲ್ಲಿ ಬೆರೆಸುತ್ತಾರೆ. ಸುವಾಸಿತ ಎಣ್ಣೆಯಲ್ಲಿ ಮತ್ತು ಕಾಂತಿವರ್ಧಕ ಔಷಧಿಗಳಲ್ಲಿಯೂ ಇದನ್ನು ಬಳಸುತ್ತಾರೆ. ಆಯುರ್ವೇದದ ಮಾತ್ರೆ, ಕಾಢಾ, ಚೂರ್ಣ, ಪಾಕ ಮತ್ತು ಆಸವ-ಅರಿಷ್ಟಗಳಲ್ಲಿ ಬಳಸುತ್ತಾರೆ. ದಾಲ್ಚಿನ್ನಿ  ಒಂದು ತರದ ಮರದ ತೊಗಟೆಯಾಗಿದೆ. ಈ ಮರಗಳು ದಕ್ಷಿಣ ಭಾರತದ ಸಮುದ್ರ ತೀರದಲ್ಲಿ ಕಂಡುಬರುತ್ತದೆ. ಇದನ್ನ ಶ್ರೀಲಂಕಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದು ಒಳ್ಳೆಯ ಸುವಾಸನೆಯಿಂದ ಕೂಡಿದ ಉಷ್ಣ ಗುಣವುಳ್ಳದ್ದಾಗಿದೆ. ಇದು ವಿಷಕಾರಿ ಪದಾರ್ಥಗಳನ್ನ ನಾಶ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಹಸಿವು ಹೆಚ್ಚಿಸುತ್ತದೆ. ವಾಯು ನಿವಾರಿಸುತ್ತದೆ.  ಶೀತ, ನೆಗಡಿ, ಕಡಿಮೆ ಮಾಡುತ್ತದೆ. ಅನ್ನಾಶಯ ಮತ್ತು ಯಾಕೃತಕ್ಕೆ ಶಕ್ತಿ ಕೊಡುತ್ತದೆ. ಆಯುರ್ವೇದದ ಅಭಿಪ್ರಾಯದಂತೆ ಇದು ಸ್ವಾದಕರ, ರುಚಿಕರ, ಸುವಾಸಿಕ, ವಾಯು ಮತ್ತು ಪಿತ್ತ ಶಾಮಕ ಶರೀರವನ್ನು ಕಾಂತಿಯುಕ್ತ ಮಾಡುತ್ತದೆ. ಇದರ ಎಣ್ಣೆ ಗಾಢವಾದ, ರುಚಿಕರ, ಸುವಾಸಿಕ ಮತ್ತು ಹೆಚ್ಚು ಕ್ಷಾರವಿರುತ್ತದೆ. ಇದು ಹಲ್ಲು ನೋವು ನಿವಾರಿಸುತ್ತದೆ.

Join Our Whatsapp Group

ಔಷಧೀಯ ಗುಣಗಳು :-

*ಹೊಟ್ಟೆ ನೋವು – ದಾಲ್ಚಿನ್ನಿ ಕಾಲು ಚಮಚ, ಹಿಂಗು ಕಾಲು ಚಮಚ ಬೆರೆಸಿ ಅರೆದು ಒಂದು ಗ್ಲಾಸ್ ನೀರಿನಲ್ಲಿ ಕುದಿಸಿ, ತಣ್ಣಗಾದ ಮೇಲೆ ಸೋಸಿ ೩ ಚಮಚ ದಿನಕ್ಕೆ ಮೂರು ಸಲ ಸೇವಿಸಿದರೆ ಹೊಟ್ಟೆ ನೋವು ಪರಿಹಾರವಾಗುತ್ತದೆ.

*ಅತಿಸಾರ – ದಾಲ್ಚಿನ್ನಿ  ಚಕ್ಕೆ ೪ ಗ್ರಾಂ, ಕಾಚು ೧೦ ಗ್ರಾಂ. ಪುಡಿ ಮಾಡಿ 250 ಗ್ರಾಂ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿದ ನಂತರ ಸೋಸಿ ಕುಡಿದರೆ ಅತಿಸಾರ ತಡೆಯುತ್ತದೆ.

* ವಾಂತಿ – ಪಿತ್ತಶಯದ ತೊಂದರೆಯಿಂದಾಗುವ ವಾಂತಿಗೆ ದಾಲ್ಚಿನ್ನಿಯ ಚೂರ್ಣವನ್ನು ಜೇನಿನೊಂದಿಗೆ ಬೆರೆಸಿ ದಿನಕ್ಕೆ 3-4 ಸಾರಿ ನೆಕ್ಕಿದರೆ ವಾಂತಿಯು ಕಡಿಮೆಯಾಗುತ್ತದೆ.

*  ಶೀತಜ್ವರ – ದಾಲ್ಚಿನ್ನಿ ಚೂರ್ಣ 5 ಗ್ರಾಂ ಲವಂಗ 3, ಕಾಲು ಚಮಚ ಶುಂಠಿ ಬೆರೆಸಿ, ಅರ್ಧ ಲೀಟರ್ ನೀರಿನಲ್ಲಿ ಕುದಿಸಿ ನಂತರ ಕೆಳಗಿಳಿಸಿ ಸೋಸಿ ಈ ನೀರನ್ನು ಮೂರು ಭಾಗ ಮಾಡಿ ಮೂರು ಸಲ ಕುಡಿಯಬೇಕು.

* ಗಂಟಲು ಊತ – ಗಂಟಲಿನೋಳಗೆ ತೀವ್ರ ನೋವು, ಶ್ವಾಸದ ತೊಂದರೆ, ಬಾಯಿ ಒಣಗುವಿಕೆ ೩-೫  ಗ್ರಾಂ ಚೂರ್ಣವನ್ನು ೫ ಗ್ರಾಂ ಜೇನಿನೊಂದಿಗೆ ಬೆರೆಸಿ ಸೇವಿಸಿದರೆ ತುಂಬಾ ಲಾಭಕಾರಿಯಾಗಿದೆ.

* ತಲೆನೋವು – ದಾಲ್ಚಿನ್ನಿ  ತೇಯ್ದು ಹಣೆಗೆ ಹಚ್ಚಿಕೊಂಡರೆ ತಲೆನೋವು ಕಡಿಮೆಯಾಗುತ್ತದೆ.