ಮನೆ ಸುದ್ದಿ ಜಾಲ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಮೈಸೂರಿನಲ್ಲಿ ವಕೀಲರ ಪ್ರತಿಭಟನೆ

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಮೈಸೂರಿನಲ್ಲಿ ವಕೀಲರ ಪ್ರತಿಭಟನೆ

0

ಮೈಸೂರು: ರಾಯಚೂರಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನ ಖಂಡಿಸಿ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನ್ಯಾಯಾಲಯದ ಮುಂಭಾಗ ಮೈಸೂರು ಬಾರ್ ಕೌನ್ಸಿಲ್ ಅಧ್ಯಕ್ಷ ಮಹದೇವಸ್ವಾಮಿ ನೇತೃತ್ವದಲ್ಲಿ  ಮಾನವ ಸರಪಳಿ ನಿರ್ಮಿಸಿ  ಪ್ರತಿಭಟಿಸಿದ ವಕೀಲರು, ನ್ಯಾಯಾಲಯದ ಮುಂಭಾಗದ ರಸ್ತೆ ಬಂದ್ ಮಾಡಿ  ನ್ಯಾಯಾಲಯದ ಕಲಾಪ ಬಂದ್ ಮಾಡಿ ವಕೀಲರು ಧರಣಿ ನಡೆಸಿದರು.

ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಧಿಕ್ಕಾರ ಕೂಗಿದ ವಕೀಲರು, ಕೂಡಲೇ ಮಲ್ಲಿಕಾರ್ಜುನಗೌಡನನ್ನು ಬಂಧಿಸಿ ದೇಶದ್ರೋಹ ಕೇಸ್ ದಾಖಲು ಮಾಡುವಂತೆ ಒತ್ತಾಯಿಸಿದರು.

ಹಿಂದಿನ ಲೇಖನಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮಹಿಳೆ ಬಂಧನ
ಮುಂದಿನ ಲೇಖನಸಿಎಂ ಇಬ್ರಾಹಿಂ ಬಳಿ ಸಿದ್ದರಾಮಯ್ಯ ಶೀಘ್ರವೇ ಮಾತನಾಡುತ್ತಾರೆ: ಸತೀಶ ಜಾರಕಿಹೊಳಿ