ಮನೆ ರಾಜಕೀಯ ಜೆಡಿಎಸ್​ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ  ಸಿಕೆ ನಾಣು ನೇಮಕ: ಸಿ.ಎಂ ಇಬ್ರಾಹಿಂ

ಜೆಡಿಎಸ್​ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ  ಸಿಕೆ ನಾಣು ನೇಮಕ: ಸಿ.ಎಂ ಇಬ್ರಾಹಿಂ

0

ಬೆಂಗಳೂರು: ಜೆಡಿಎಸ್’ನ ನೂತಬ​ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸಿಕೆ ನಾಣು ಅವರನ್ನು ನೇಮಕ ಮಾಡಲಾಗಿದೆ ಎಂದು  ಉಚ್ಛಾಟಿತ ಜೆಡಿಎಸ್ ಅಧ್ಯಕ್ಷ ಸಿ.ಎಂ ಇಬ್ರಾಹಿಂ ತಿಳಿಸಿದ್ದಾರೆ.

ಇಂದು(ಡಿಸೆಂಬರ್ 11) ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್ ​ನಲ್ಲಿ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ನೇಮಕ ಮಾಡಲಾಗಿದೆ. ಇದು ನನ್ನ ನಿರ್ಣಯ ಅಲ್ಲ, ರಾಷ್ಟ್ರೀಯ ಕೌನ್ಸಿಲ್ ನಿರ್ಣಯ. ನಿತೀಶ್ ಕುಮಾರ್, ಲಾಲು ಪ್ರಸಾದ್​ ಭೇಟಿಗೆ ಹೋಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಸಮಾವೇಶಕ್ಕೆ ಅಖಿಲೇಶ್, ನಿತೀಶ್, ರಾಹುಲ್​ ಗಾಂಧಿಗೆ ಆಹ್ವಾನ ನೀಡಲಾಗುವುದು. ಸತ್ತವರ ಫೋಟೋ ಹಾಕಿದ್ದಾರೆ ಎಂದು ದೇವೇಗೌಡರು ಹೇಳಿದ್ರು. ಜಯಪ್ರಕಾಶ್ ನಾರಾಯಣ್, ಗಾಂಧೀಜಿ‌, ರಾಮಕೃಷ್ಣ ಹೆಗಡೆ ಇವರು ಸತ್ತರೂ ಸಿದ್ದಾಂತದಿಂದ ಜೀವಂತವಾಗಿರುತ್ತಾರೆ. ಕೆಲವರು ಬದುಕಿದ್ದರೂ ಹೆಣ ಎನ್ನುವುದನ್ನು ಹೇಳಲು ಇಷ್ಟಪಡುತ್ತೇನೆ ಎಂದು ದೇವೇಗೌಡ ಅವರಿಗೆ ತಿರುಗೇಟು ನೀಡಿದರು.

ಮಕ್ಕಳ ಹಿತ, ಎರಡು ಸೀಟ್ ​ಗಾಗಿ ಸಿದ್ಧಾಂತ ಬಲಿ ಕೊಟ್ಟಿದ್ದೀರಿ. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾಣುಗೆ ನೀಡಲಾಗಿದೆ. ನಾವು ಮೂರು ಅವಕಾಶ ಕೊಟ್ಟೆ. ಕೊನೆಗೆ ಇವತ್ತು ಅವರನ್ನ(ದೇವೇಗೌಡ) ಅಧ್ಯಕ್ಷಗಿರಿಯಿಂದ ತೆಗೆದು ಸಿಕೆ ನಾಣು ಅವರಿಗೆ ಅಧಿಕಾರ ಕೊಟ್ಟಿದ್ದೇವೆ 92ನೇ ವಯಸ್ಸಿನಲ್ಲಿ ತಮ್ಮ ಸಿದ್ದಾಂತ ಬಿಟ್ಟು ಕೊಟ್ರಿ. ನಾನು ಹುಟ್ಟಿದ್ದು ಸಿದ್ದಾಂತಕ್ಕಾಗಿ. ವಾಜಪೇಯಿಯವರು ಮಂತ್ರಿಯಾಗಲು ಕರೆದರೂ ನಾನು ಹೋಗಲಿಲ್ಲ. ಗೌವರ್ನರ್ ಆಗಲು ಕರೆದದೂ ಹೋಗಲಿಲ್ಲ. 5 ಮಂದಿ ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೊಸ ಬಾಂಬ್ ಸಿಡಿಸಿದರು.