ಮನೆ ರಾಜ್ಯ ಅಕ್ರಮ ಮೊಬೈಲ್ ಟವರ್ ಸ್ಥಾಪಿಸಿರುವ ಸಂಸ್ಥೆಗಳಿಗೆ ದಂಡ ವಿಧಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಅಕ್ರಮ ಮೊಬೈಲ್ ಟವರ್ ಸ್ಥಾಪಿಸಿರುವ ಸಂಸ್ಥೆಗಳಿಗೆ ದಂಡ ವಿಧಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

0

ಬೆಂಗಳೂರು: ರಾಜ್ಯಾದ್ಯಂತ ಅಕ್ರಮವಾಗಿ ಮೊಬೈಲ್ ಟವರ್‌ ಗಳನ್ನು ಸ್ಥಾಪಿಸಿರುವ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಕ್ರಮವಾಗಿ ಟವರ್‌ ಗಳನ್ನು ಅಳವಡಿಸಿರುವ ಟೆಲಿಕಾಂ ಸೇವಾ ಪೂರೈಕೆದಾರರಿಗೆ ರಾಜ್ಯ ಸರ್ಕಾರ ದಂಡ ವಿಧಿಸಬೇಕು ಎಂದು ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ ಸಿದ್ದರಾಮಯ್ಯ ಈ ನಿರ್ದೇಶನ ನೀಡಿದ್ದಾರೆ.

ಈ ಮೂಲಕ ರಾಜ್ಯವು 7,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಇನ್‌ ಸ್ಟಾಲೇಶನ್ ಆಫ್ ನ್ಯೂ ಟೆಲಿಕಮ್ಯುನಿಕೇಶನ್ ಇನ್ಫ್ರಾಸ್ಟ್ರಕ್ಚರ್ ಟವರ್ಸ್ ನಿಯಮಾವಳಿ 2019 ರ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷ ರೂ.ವರೆಗೆ, ಇತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50,000 ರೂ, ನಗರ ಪುರಸಭೆ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಪಂಚಾಯ್ತಿ ಮಿತಿಗಳಲ್ಲಿ 35,000 ರೂ. ಇನ್​ ಸ್ಟಾಲೇಶನ್ ಚಾರ್ಜಸ್ ವಿಧಿಸಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಸುಮಾರು 8,000 ಇಂತಹ ಟವರ್‌ಗಳು ಇದ್ದು ಮತ್ತು ರಾಜ್ಯದಾದ್ಯಂತ 48,000 ಇವೆ.

ರಾಜ್ಯದಲ್ಲಿರುವ ಟವರ್‌ ಗಳ ಪೈಕಿ ಹಲವನ್ನು ಇನ್​ಸ್ಟಾಲೇಶನ್ ಚಾರ್ಜಸ್ ಪಾವತಿಸದೆ ಸ್ಥಾಪಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸಿಎಂಗೆ ಸಲ್ಲಿಸಿದ್ದ ಮನವಿ ಪತ್ರದಲ್ಲಿ ರಮೇಶ್ ಉಲ್ಲೇಖಿಸಿದ್ದರು. ಅಳವಡಿಕೆ ಶುಲ್ಕವನ್ನು ಇತರೆ ತೆರಿಗೆಯೊಂದಿಗೆ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಇತರ ರಾಜ್ಯಗಳು ಮೊಬೈಲ್ ಟವರ್‌ ಗಳಿಂದ 2 ಲಕ್ಷ ರೂ.ವರೆಗೆ ಶುಲ್ಕವನ್ನು ಸಂಗ್ರಹಿಸುತ್ತವೆ. ಕರ್ನಾಟಕ ಕೂಡ ಶುಲ್ಕ ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದ್ದರು.

ಹಿಂದಿನ ಲೇಖನಜೆಡಿಎಸ್​ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ  ಸಿಕೆ ನಾಣು ನೇಮಕ: ಸಿ.ಎಂ ಇಬ್ರಾಹಿಂ
ಮುಂದಿನ ಲೇಖನವಿಟ್ಲ: ಗ್ರಾಹಕರ ಸೋಗಿನಲ್ಲಿ ಬಂದು ಮೊಬೈಲ್ ಎಗರಿಸಿದ ಕಳ್ಳ