ಮನೆ ರಾಜ್ಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ಮಧ್ಯೆ ಗಲಾಟೆ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ಮಧ್ಯೆ ಗಲಾಟೆ

0

ಉತ್ತರ ಕನ್ನಡ: ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆಯಾಗಿದೆ.

Join Our Whatsapp Group

ಈ ಹಿನ್ನೆಲೆ ಏಳು ದಿನದವರೆಗೆ ಯಥಾ ಸ್ಥಿತಿ ಮುಂದುವರೆಸುವಂತೆ ಕುಮಟಾ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅವರು ಸೂಚನೆ ನೀಡಿದ್ದಾರೆ. ಅದರಂತೆ ಎಸಿ ಸೂಚನೆ ಹಿನ್ನೆಲೆ ಜಂಬೆ ಮನೆತನದ ಅರ್ಚಕರು ನಂದಿ ಮಂಟಪದಲ್ಲಿ ತೀರ್ಥ ನೀಡುವ ಕಾಯಕ ಮುಂದುವರೆಸಿದ್ದಾರೆ.

ಇನ್ನು ಸಹಾಯಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಭಟನೆಗಿಳಿದಿದ್ದ ಗೋಪಿ ಮನೆತನದ ಅರ್ಚಕರು ಸಧ್ಯ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ದೇವಸ್ಥಾನದ ನಂದಿ ಮಂಟಪದಲ್ಲಿ ತೀರ್ಥ ನೀಡುವ ವಿಚಾರವಾಗಿ ಜಂಬೆ ಮನೆತನ ಹಾಗೂ ಗೋಪಿ ಮನೆತನದ ನಡುವೆ ಇಂದು(ಮೇ.09) ವಿವಾದ ಏರ್ಪಟ್ಟಿತ್ತು. ನಿಗದಿಯಂತೆ ಜಂಬೆ ಮನೆತನ ಗೋಪಿ ಮನೆತಕ್ಕೆ ತೀರ್ಥ ನೀಡುವ ಕಾಯಕ ವಹಿಸುವಂತೆ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಗೋಪಿ ಮನೆತನದ ಅರ್ಚಕರು ಪ್ರತಿಭಟನೆಗಿಳಿದಿದ್ದರು.

ಈ ಹಿಂದೆ ಕೂಡ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಾಗೂ ಆರತಿ ತಟ್ಟೆಯ ಕಾಸಿನ ಹಕ್ಕಿಗಾಗಿ ಅರ್ಚಕರು ಕೋರ್ಟ್​ ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಇದೀಗ ತೀರ್ಥ ನೀಡುವ ವಿಚಾರಕ್ಕಾಗಿ ಎರಡು ಮನೆತನದ ನಡುವೆ ಗಲಾಟೆ ಶುರುವಾಗಿದೆ. ಈ ಹಿನ್ನಲೆ ಎಚ್ಚೆತ್ತ ಎಸಿ ಅವರು ಕೂಡಲೇ ಮಧ್ಯಸ್ಥಿಕೆ ವಹಿಸಿ ಭಕ್ತರಿಗೆ ದೇವರ ದರ್ಶನಕ್ಕೆ, ಪೂಜೆಗೆ ಅಡ್ಡಿಯಾಗಿದ್ದಂತೆ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್ ‌ನಿಂದ ಜನಾಂಗೀಯ ‌ನಿಂದನೆ, ಶಾಂತಿಯ ತೋಟ ಕದಡಿದ ಕಾಂಗ್ರೆಸ್ ನಾಯಕರು: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
ಮುಂದಿನ ಲೇಖನಅವಧಿ ಮೀರಿದ ಸಾಲ ಮರುವಸೂಲಿ ಸಾಧ್ಯವೇ? ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್