ಮನೆ ಅಪರಾಧ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಗಾಂಜಾಗಾಗಿ ಜೈಲು ಸಿಬ್ಬಂದಿ, ವಿಚಾರಣಾಧೀನ ಖೈದಿ ಮಧ್ಯೆ ಗಲಾಟೆ

ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಗಾಂಜಾಗಾಗಿ ಜೈಲು ಸಿಬ್ಬಂದಿ, ವಿಚಾರಣಾಧೀನ ಖೈದಿ ಮಧ್ಯೆ ಗಲಾಟೆ

0

ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಗಾಂಜಾಗಾಗಿ ಜೈಲು ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿ ಮಧ್ಯೆ ಗಲಾಟೆ ನಡೆದಿದೆ.

ಅಪರಿಚಿತ ವ್ಯಕ್ತಿಗಳು ಕಲಬುರಗಿ ಸೆಂಟ್ರಲ್ ಜೈಲಿನ ಒಳಗೆ ಎರಡು ಗಾಂಜಾ ಪ್ಯಾಕೆಟ್ ​ಗಳನ್ನು ಎಸೆದಿದ್ದರು. ಜೈಲೊಳಗೆ ಬಿದ್ದ ಗಾಂಜಾ ವಶಪಡಿಸಿಕೊಳ್ಳುವಾಗ ವಿಚಾರಣಾಧೀನ ಖೈದಿ ಶಾಹೀದ್ ಖುರೇಷಿ ಜೈಲು ಸಿಬ್ಬಂದಿಯ ಜೊತೆ ಗಲಾಟೆ ಮಾಡಿದ್ದಾನೆ. ಗಾಂಜಾ ನನಗೆ ಬೇಕು ಕೊಡಿ ಎಂದು ಜಗಳವಾಡಿದ್ದಾನೆ. ಇನ್ನು ಪ್ಯಾಕೆಟ್ ತೆಗೆದು ನೋಡಿದಾಗ ಅದರಲ್ಲಿ 150 ಗ್ರಾಂ ಗಾಂಜಾ ಹಾಗೂ ಎರಡು ಮೊಬೈಲ್ ಪತ್ತೆಯಾಗಿದೆ.

ಘಟನೆ ಸಂಬಂಧ ಫರತಹಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹಿಂದಿನ ಲೇಖನಪಿಎಂ ಆವಾಸ್ ಗ್ರಾಮೀಣ ಯೋಜನೆಯ ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಿಡುಗಡೆ
ಮುಂದಿನ ಲೇಖನದೆಹಲಿಯಲ್ಲಿ ದಟ್ಟ ಮಂಜು: 50ವಿಮಾನ, 30 ರೈಲುಗಳಲ್ಲಿ ಸಂಚಾರ ವ್ಯತ್ಯಯ