ಮನೆ ಸುದ್ದಿ ಜಾಲ ಅಗ್ನಿ ಅವಘಡ: ಹೊತ್ತಿ ಉರಿದ ಶಾಪಿಂಗ್ ಮಾಲ್

ಅಗ್ನಿ ಅವಘಡ: ಹೊತ್ತಿ ಉರಿದ ಶಾಪಿಂಗ್ ಮಾಲ್

0

ಬೆಂಗಳೂರು: ಶಾಪಿಂಗ್ ಮಾಲ್ ಒಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಶಾಪಿಂಗ್ ಮಾಲ್ ಹೊತ್ತಿ ಉರಿದಿರುವ ಘಟನೆ ಶನಿವಾರ ಅರಕೆರೆ ಗೇಟ್ ಬಳಿಯ ‘ಸೌಥ್ ಇಂಡಿಯಾ ಮಾಲ್​’ನಲ್ಲಿ ನಡೆದಿದೆ.

ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ತನ್ನ ಕೆನ್ನಾಲಿಗೆಯನ್ನು ಇತರೆಡೆ ಹರಡಲು ಆರಂಭಿಸಿತು. ಪರಿಣಾಮ ಮಾಲ್​ನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟುಕರಕಲಾಗಿವೆ ಎಂದು ತಿಳಿದುಬಂದಿದೆ. ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರಬಹುದು  ಎಂಬ ಅನುಮಾನ ವ್ಯಕ್ತವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಆರು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಹಿಂದಿನ ಲೇಖನವೀಕೆಂಡ್ ಕರ್ಫ್ಯೂ ನಡುವೆ ಸಂಕ್ರಾಂತಿ ಸಂಭ್ರಮ
ಮುಂದಿನ ಲೇಖನಕೊರೋನಾ: ಇಂದು 2.68 ಲಕ್ಷ ಹೊಸ ಕೇಸ್ ಪತ್ತೆ