ಮನೆ ರಾಜ್ಯ ದನದ ಕೊಟ್ಟಿಗೆ ತೆರವು: ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ

ದನದ ಕೊಟ್ಟಿಗೆ ತೆರವು: ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ

0

ಪಾಂಡವಪುರ:ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ‍್ಯಕರ್ತನೋರ್ವ ಮನೆಪಕ್ಕದ ಸರಕಾರಿ ಸರ್ವೇ ನಂಬರ್‌ನಲ್ಲಿ ಜಾಗದಲ್ಲಿ ನಿರ್ಮಾಣ ಮಾಡಿರುವ ಕೊಟ್ಟಿಗೆಯನ್ನು ತೆರವುಗೊಳಿ

ಸುವಂತೆ ತಹಶೀಲ್ದಾರ್ ಆದೇಶ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬುಧವಾರ ನಡೆಯಿತು.

ತಹಶೀಲ್ದಾರ್ ಆದೇಶದಂತೆ ಪೊಲೀಸರ ನೇತೃತ್ವದಲ್ಲಿ ದನದ ಕೊಟ್ಟಿಗೆ ತೆರವುಗೊಳಿಸಲು ಮುಂದಾದ ರವಿನ್ಯೂ ಇನ್ಸ್ಪೆಕ್ಟರ್, ಗ್ರಾಮಲೆಕ್ಕಗ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.ಇದು ರಾಜಕೀಯ ಉದ್ದೇಶವಾಗಿ ಮಾಡುತ್ತಿರುವ ಕರ‍್ಯಾಚರಣೆ, ತಹಶೀಲ್ದಾರ್ ಅವರು ರಾಜಕೀಯ ಒತ್ತಡಕ್ಕೆ ಮಣಿದು ಕೊಟ್ಟಿಗೆ ತೆರವುಗೊಳಿಸುವಂತೆ ಆದೇಶಿಸಿದ್ದಾರೆ. ವಡ್ಡರಹಳ್ಳಿ ಗ್ರಾಮದಲ್ಲಿ ದೇವರಾಜು ಒಬ್ಬರೇ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಲ್ಲ. ಇನ್ನೂ ಹಲವಾರು ಮಂದಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ, ಅವುಗಳನ್ನು ತೆರವುಗೊಳಿಸಿ ಬಳಿಕ ನಮ್ಮದನ್ನು ತೆರವುಗೊಳಿಸಿ ಅಲ್ಲಿಯವರೆಗೆ ನಾವು ಮನೆ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟಹಿಡಿದರು. ಈ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನಚಕಮಕಿ ನಡೆಯಿತು. ಮಧ್ಯ ಪ್ರದೇಶದ ಪೊಲೀಸರು ಸಮಾಧಾನಪಡಿಸಿದರು. ತೆರವುಗೊಳಿಸಲು ಒಂದು ತಿಂಗಳು ಕಾಲಾವಕಾಶ ನೀಡಿ ಅಧಿಕಾರಿಗಳು ಸ್ಥಳದಿಂದ ತೆರಳಿದರು.

ರಾಜಕೀಯ ಒತ್ತಡದಿಂದ ಆದೇಶ:-

ವಡ್ಡರಹಳ್ಳಿ ಗ್ರಾಮದ ಜೆಡಿಎಸ್ ಕರ‍್ಯಕರ್ತ ದೇವರಾಜು ಎಂಬುವರು ತಮ್ಮ ಮನೆಪಕ್ಕದ ಸರ್ವೇ ನಂ.೧೨೮ರಲ್ಲಿ ೧೫ ಮತ್ತು ೨೯ ಅಡಿ ಜಾಗದಲ್ಲಿ ದನದ ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ. ರಾಜಕೀಯ ದುರದ್ದೇಶದಿಂದ ದನದಕೊಟ್ಟಿಗೆ ತೆರವುಗೊಳಿಸುವಂತೆ ರೈತಸಂಘದ ಕರ‍್ಯಕರ್ತರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ದೇವರಾಜು ಅವರು ವಡ್ಡರಹಳ್ಳಿ ಗ್ರಾಮದಲ್ಲಿ ಸರಕಾರಿ ಸರ್ವೇ ನಂ.೧೨೯, ೧೨, ೧೩೦, ೧೨೭ ಹಾಗೂ ೦೧ರಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ, ಅವುಗಳ ಬಗ್ಗೆಯೂ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಶ್ರೇಯಸ್ ಅವರಿಗೆ ಪ್ರತಿ ದೂರು ನೀಡಿದ್ದಾರೆ. ಆದರೆ, ತಹಶೀಲ್ದಾರ್ ಅವರು ಎಲ್ಲವನ್ನು ಬಿಟ್ಟು ಕೇವಲ ಜೆಡಿಎಸ್ ಕರ‍್ಯಕರ್ತ ದೇವರಾಜು ಎಂಬುವರು ನಿರ್ಮಿಸಿರುವ ದನದಕೊಟ್ಟಿಗೆ ತೆರವುಗೊಳಿಸುವಂತೆ ಆದೇಶಿಸಿದ್ದಾರೆ ಎಂದು ದೇವರಾಜು ಆರೋಪಿಸಿದರು.

ತಾಲೂಕು ದಂಡಾಧಿಕಾರಿಗಳು ಎಲ್ಲರಿಗೂ ಸಮಾನವಾದ ನ್ಯಾಯದೊರಕಿಸಿಕೊಡಬೇಕು, ಅದನ್ನು ಬಿಟ್ಟು ನಾನೊಬ್ಬ ಜೆಡಿಎಸ್ ಪಕ್ಷದ ಕಾರ‍್ಯಕರ್ತ ಎಂಬ ಒಂದೇ ಉದ್ದೇಶದಕ್ಕಾಗಿ ರಾಜಕೀಯ ಒತ್ತಡಕ್ಕೆ ಮಣಿದು ತಹಶೀಲ್ದಾರ್ ಅವರು ನನ್ನೊಂದು ಮನೆ ತೆರವುಗೊಳಿಸಲು ಆದೇಶ ನೀಡಿರುವುದು ಸರಿಯಲ್ಲ. ತೆರವುಗೊಳಿಸಲು ಆದೇಶ ನೀಡುವುದಾದರೆ ಎಲ್ಲವನ್ನು ತೆರವುಗೊಳಿಸಲಿ,ಜತೆಗೆ ತಾಲೂಕಿನಲ್ಲಿ ಈ ರೀತಿಯಾಗಿ ಸಾಕಷ್ಟು ಅಕ್ರಮವಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿದ್ದಾರೆ ಅವುಗಳನ್ನು ಸಹ ತೆರವುಗೊಳಿಸಲು ತಹಶೀಲ್ದಾರ್ ಅವರು ಆದೇಶ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.