ಮನೆ ಶಿಕ್ಷಣ ಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆಗಳಿಗೆ ಕೆಎಸ್’ಒಯು ವತಿಯಿಂದ ತರಬೇತಿ

ಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆಗಳಿಗೆ ಕೆಎಸ್’ಒಯು ವತಿಯಿಂದ ತರಬೇತಿ

0

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌’ಒಯು)ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಯುಜಿಸಿ ನಡೆಸಲಿರುವ ರಾಷ್ಟ್ರ ಮಟ್ಟದ ಸಹಾಯಕ ಪ್ರಾಧ್ಯಾಪಕರ ಮತ್ತು ಕಿರಿಯ ಸಂಶೋಧನಾ ಸಹಾಯಕರ ಅರ್ಹತಾ ಪರೀಕ್ಷೆ (ಯುಜಿಸಿ-ನೆಟ್) ಹಾಗೂ ಕರ್ನಾಟಕ ಸರ್ಕಾರ ನಡೆಸಲಿರುವ ರಾಜ್ಯ ಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ (ಕೆ-ಸೆಟ್) ಪರೀಕ್ಷೆಗಳಿಗೆ 45 ದಿನದ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಉದ್ಘಾಟನೆ ಕಾರ್ಯಕ್ರಮವು ಮಾರ್ಚ್‌ 2ರಂದು ಬೆಳಿಗ್ಗೆ 11ಕ್ಕೆ ವಿ.ವಿಯ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ.

ನಿವೃತ್ತ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ಉದ್ಘಾಟಿಸುವರು. ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸುವರು. ಕುಲಸಚಿವ ಪ್ರೊ.ಕೆ.ಎಲ್.ಎನ್. ಮೂರ್ತಿ ಭಾಗವಹಿಸುವರು.ಆಸಕ್ತರು ತರಬೇತಿಗೆ ಸೇರಲು ಅವಕಾಶವಿದೆ ಎಂದು ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 0821 2515944/9964760090 ಸಂಪರ್ಕಿಸಬಹುದು.

ಹಿಂದಿನ ಲೇಖನ‘ಬಳ್ಳಾರಿ ಅಂಧತ್ವ ಮುಕ್ತ ಜಿಲ್ಲೆ’ ಅಭಿಯಾನಕ್ಕೆ ಉತ್ತಮ ಸ್ಪಂದನೆ: ಸಚಿವ ಡಾ.ಕೆ.ಸುಧಾಕರ್‌
ಮುಂದಿನ ಲೇಖನನಂಬಿದೆ ನಿನ್ನ ನಾಗಾಭರಣ