ಮನೆ ದೇವರ ನಾಮ ನಂಬಿದೆ ನಿನ್ನ ನಾಗಾಭರಣ

ನಂಬಿದೆ ನಿನ್ನ ನಾಗಾಭರಣ

0

ನಂಬಿದೆ ನಿನ್ನ ನಾಗಾಭರಣ

ಕಾಯೋ ಕರುಣಾಮಯ ನನ್ನ

ನಿನ್ನೀ ನಾಮವು ಒಂದೇ

ನೀಗಿಸಬಲ್ಲದು ಬಾಧೆ

ತನುಮನ ಜೀವನ ಪಾವನವಯ್ಯ

ಶಂಭೋ ಎನ್ನಲು ಇಲ್ಲ ಭಯ

ಬಾಡದ ಹೂವಿನ ಮಾಲೆ

ಬಾಗಿತು ಪಾದದ ಮೇಲೆ

ಪ್ರೇಮಮಯ ನಿನಗೆ ಜಯ

ನನ್ನ ಜೀವನ ನಿನ್ನಲಿ ತನ್ಮಯ

ಬಾಳಿನ ಹಾದಿಯ ಬೆಳಗಯ್ಯ ||

ಲೋಕವ ಕಾಯುವ ಸ್ವಾಮಿ

ಭಿಕ್ಷೆಯ ಬೇಡಿದ ಪ್ರೇಮಿ

ಭಸ್ಮಮಯ ಬಿಲ್ವಪ್ರಿಯ

ನನ್ನೀ ದೇಹವೇ ನಿನ್ನಯ ಆಲಯ

ಸೇವಾ ಭಾಗ್ಯವ ನೀಡಯ್ಯ

ಹಿಂದಿನ ಲೇಖನಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆಗಳಿಗೆ ಕೆಎಸ್’ಒಯು ವತಿಯಿಂದ ತರಬೇತಿ
ಮುಂದಿನ ಲೇಖನಹೈ ಬಿಪಿ ನಿಯಂತ್ರಿಸುವ ಯೋಗಾಸನಗಳಿವು