ಮನೆ ಅಪರಾಧ ಉಪ್ಪಿನ ಪ್ಯಾಕೆಟ್ ನಲ್ಲಿ ಕೊಕೇನ್ ಸಾಗಾಣೆ: 500 ಕೋಟಿಗೂ ಅಧಿಕ ಮೌಲ್ಯದ ಕೊಕೇನ್ ವಶ

ಉಪ್ಪಿನ ಪ್ಯಾಕೆಟ್ ನಲ್ಲಿ ಕೊಕೇನ್ ಸಾಗಾಣೆ: 500 ಕೋಟಿಗೂ ಅಧಿಕ ಮೌಲ್ಯದ ಕೊಕೇನ್ ವಶ

0

ಬೆಂಗಳೂರು(Bengaluru): ಉಪ್ಪಿನ ಪ್ಯಾಕೇಟ್ ನಲ್ಲಿ ಕೊಕೇನ್ ನಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 500 ಕೋಟಿಗೂ ಅಧಿಕ ಮೌಲ್ಯದ 52 ಕೆಜಿ ಕೊಕೇನ್ ಅನ್ನು ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಗುಜರಾತ್‌ನ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಕೊಕೇನ್ ನ್ನು ವಶಪಡಿಸಿಕೊಂಡಿರುವ ಡಿಆರ್ ಐ ಅಧಿಕಾರಿಗಳು, ಇರಾನ್‌ನಿಂದ ಆಮದು ಮಾಡಿಕೊಂಡಿದ್ದ ಉಪ್ಪು ಪ್ಯಾಕೆಟ್‌ನಲ್ಲಿ ಕೊಕೇನ್‌ ಅನ್ನು ಅಡಗಿಸಿ ಇರಿಸಲಾಗಿತ್ತು ಎಂದು ಹೇಳಿದ್ದಾರೆ.

ಗುಪ್ತಚರ ಮಾಹಿತಿಯ ಮೇರೆಗೆ ಮೇ 24ರಿಂದ 26ರ ವರೆಗೆ ‘ಆಪರೇಷನ್ ನಮಕೀನ್‘ ಹೆಸರಿನ ಕಾರ್ಯಾಚರಣೆಯನ್ನು ಡಿಆರ್‌ಐ ಅಧಿಕಾರಿಗಳು ನಡೆಸಿದ್ದು, ಈ ಸಂದರ್ಭದಲ್ಲಿ ಉಪ್ಪಿನ ಪ್ಯಾಕೆಟ್‌ನಲ್ಲಿ ಕೊಕೇನ್ ಕಳ್ಳಸಾಗಣೆ ನಡೆಸಿರುವುದು ಪತ್ತೆಯಾಗಿದೆ.

ದೇಶದಲ್ಲಿ 2021 ಮತ್ತು 2022ನೇ ಸಾಲಿನಲ್ಲಿ ಈವರೆಗೆ 321 ಕೆ.ಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಮೌಲ್ಯ 3,200 ಕೋಟಿ ಆಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ.