ಮನೆ ಸಾಹಿತ್ಯ ಲೇಖಕಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

ಲೇಖಕಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

0

ನವದೆಹಲಿ(New Delhi): ಲೇಖಕಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ 2022ನೇ ಸಾಲಿನ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ

ಇದು ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದಿ ಕಾದಂಬರಿಯಾಗಿದೆ. ಈ ಕೃತಿಯನ್ನು ಅಮೆರಿಕದ ಡೇಸಿ ರಾಕ್​ವೆಲ್ ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ಈ ಪ್ರಶಸ್ತಿಯು 50 ಸಾವಿರ ಪೌಂಡ್ ಮೌಲ್ಯದ್ದಾಗಿದೆ.

ಈ ಸಾಹಿತ್ಯ ಪ್ರಶಸ್ತಿಗೆ ಜಗತ್ತಿನ ನಾನಾ ಭಾಗಗಳಿಂದ ಅನೇಕ ಮಹತ್ವದ ಪುಸ್ತಕಗಳು ಸ್ಪರ್ಧೆಯಲ್ಲಿದ್ದವು. ಆದರೆ ಅಂತಿಮವಾಗಿ, ಗೀತಾಂಜಲಿ ಶ್ರೀ ಅವರ ಈ ಕೃತಿಗೆ ಪ್ರಶಸ್ತಿ ಲಭಿಸಿದೆ.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಜನಿಸಿದ ಗೀತಾಂಜಲಿ ದೆಹಲಿ ನಿವಾಸಿ. ಇವರು ಮೂರು ಕಾದಂಬರಿಗಳು ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಇದರಲ್ಲಿ ಹಲವು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಜರ್ಮನ್ ಹಾಗೂ ಕೊರಿಯಾ ಭಾಷೆಗಳಿಗೆ ಭಾಷಾಂತರಗೊಂಡಿವೆ.

`ಟಾಂಬ್ ಆಫ್ ಸ್ಯಾಂಡ್’ ಬ್ರಿಟನ್​ನಲ್ಲಿ ಪ್ರಕಟವಾಗಿರುವ ಅವರ ಮೊದಲ ಕೃತಿಯಾಗಿದೆ. ಈ ಕಾದಂಬರಿಯು ಉತ್ತರ ಭಾರತದ 80 ವರ್ಷದ ವೃದ್ಧೆ ತನ್ನ ಪತಿಯನ್ನು ಕಳೆದುಕೊಂಡ ಬಳಿಕ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗುವುದು ಮತ್ತು ಅದರಿಂದ ಹೊರಬರುವುದು ಸೇರಿದಂತೆ ಹಲವು ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ.

ಹಿಂದಿನ ಲೇಖನಉಪ್ಪಿನ ಪ್ಯಾಕೆಟ್ ನಲ್ಲಿ ಕೊಕೇನ್ ಸಾಗಾಣೆ: 500 ಕೋಟಿಗೂ ಅಧಿಕ ಮೌಲ್ಯದ ಕೊಕೇನ್ ವಶ
ಮುಂದಿನ ಲೇಖನನಾಯಿ ಜೊತೆ ವಾಕ್‌ ಗಾಗಿ ಕ್ರೀಡಾಂಗಣ ದುರ್ಬಳಕೆ: ದಂಪತಿಗಳ ವರ್ಗಾವಣೆ