ಬಳ್ಳಾರಿ : ಬಳ್ಳಾರಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ 16.17 ಕೋಟಿ ಹಣ ಲೂಟಿ ನಡೆದಿದ್ದು, ಈ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಬಟಾಬಯಲಾಗಿದೆ. ಬಳ್ಳಾರಿ ವಲಯ ಕೆಐಎಡಿಬಿ ಕಚೇರಿಯಲ್ಲಿ 16.17 ಕೋಟಿ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು, ಕೆಐಡಿಬಿ ಕಚೇರಿಯ ಗುತ್ತಿಗೆ ನೌಕರ ಹಾಗೂ ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿ ಒಟ್ಟು 7 ಜನರಿಂದ ಕೃತ್ಯ ನಡೆದಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದ 7 ಜನರ ವಿರುದ್ಧ ಬಳ್ಳಾರಿ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗುತ್ತಿಗೆ ನೌಕರ ಸಂತೋಷ್ ಕುಮಾರ್ ಎನ್ನುವನಿಂದ ಚೆಕ್ಗಳಿಗೆ ಅಧಿಕಾರಿಗಳ ನಕಲಿ ಸಹಿ ಮಾಡುವ ಮೂಲಕ, ಕೆಐಡಿಬಿ ಖಾತೆಯಿಂದ ಇತರೆ ಅಕೌಂಟ್ಗಳಿಗೆ ಹಲವು ಬಾರಿ ಹಣ ವರ್ಗಾವಣೆಯಾಗಿದೆ. 2022 ರಿಂದ 2026 ರ ಅವಧಿಯಲ್ಲಿ ಹಣ ಲೂಟಿ ಮಾಡಿದ್ದಾರೆ. 4 ವರ್ಷದಿಂದ ಇದೇ ರೀತಿ ಹಣ ಕೆಐಡಿಬಿ ಖಾತೆಯಿಂದ ಇತರೆ ಖಾತೆಗಳಿಗೆ ವರ್ಗಾವಣೆಯಾಗಿದೆ.
ಇಷ್ಟೆಲ್ಲಾ ನಡಿತಿದ್ರೂ ಮೇಲಾಧಿಕಾರಿಗಳಿಗೆ ತಿಳಿದಿಲ್ಲವಂತೆ. 2026 ಮಾರ್ಚ್ 3 ರಂದು ಕೃತ್ಯ ಬಯಲಿಗೆ ಅಂತಾ ಕೆಐಡಿಬಿ ಅಧಿಕಾರಿಗಳಿಂದ ದೂರು ನೀಡಲಾಗಿದೆ. ದೂರಿನ ಬಳಿಕ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಪಾರಾರಿಯಾಗಿದ್ದಾನೆ. ಇನ್ನೂ ಬಹುಕೋಟಿ ವಂಚನೆ ಪ್ರಕಾರಣ ಆಗಿರೋದ್ರಿಂದ ಇಡೀ ಪ್ರಕರಣವನ್ನ ಸಿಐಡಿಗೆ ಒಪ್ಪಿಸಲು ಬಳ್ಳಾರಿ ಪೊಲೀಸರು ತಯಾರಿ ನಡೆಸಿದ್ದಾರೆ.















