ಪ್ರಶ್ನೆ: ರಾಮನು ಮರದಿಂದ ಕೆಳಗೆ ಬಿದ್ದನು- ಇದು ಯಾವ ಕಾಲ?
ಗುಂಡ: ರಾಮನಿಗೆ ಕೆಟ್ಟಕಾಲ
***
ಪ್ರಶ್ನೆ: ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಗುಂಡ: ಕುಳಿತುಕೊಂಡನು.
***
ಪ್ರಶ್ನೆ: ವಾಸ್ಕೋಡಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಗುಂಡ: ಎರಡನೇ ಹೆಜ್ಜೆ ಇಟ್ಟನು.
**** ಪ್ರಶ್ನೆ; ಸತ್ಯ ಹರಿಶ್ಚಂದ್ರನ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಗುಂಡ: ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.
***
ಪ್ರಶ್ನೆ: ರಾಮಾಯಣದಿಂದ ತಿಳಿಯಬೇಕಾದ ನೀತಿ ಏನು?
ಗುಂಡ: ಹೆಂಡತಿಗೆ ಮಾತು ಕೊಡಬಾರದು, ಕೊಟ್ಟರೂ ಅದನ್ನು ವರ್ಷಗಳ ಕಾಲ ಕಾದಿಡಬಾರದು.
***
ಪ್ರಶ್ನೆ: ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಗುಂಡ: ಸ್ನಾನದ ಕೋಣೆಗೆ ಬಾಗಿಲು ಇದುವುದು ಅತೀ ಅವಶ್ಯ.