ನವದೆಹಲಿ: ಪೆಟ್ರೋಲ್ ,ಡೀಸೆಲ್ ದರ ಏರಿಕೆ ಬಳಿಕ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 250 ರೂ ಏರಿಕೆಯಾಗಿದೆ.
ಈ ಮೂಲಕ 19 ಕೆಜಿಯ ಎಲ್ ಪಿಜಿ ಸಿಲಿಂಡರ್ ಬೆಲೆ 2,253 ರೂ.ಗೆ ಹೆಚ್ಚಳವಾಗಿದೆ. 2 ತಿಂಗಳಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಒಟ್ಟು 346 ರೂಪಾಯಿ ಏರಿಕೆಯಾಗಿದೆ. ಇನ್ನು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ವಾಣಿಜ್ಯ ಚಟುವಟಿಕೆಗಳು ಸಹಿತ ಹೊಟೇಲ್ ಉಪಹಾರ ಬೆಲೆಯಲ್ಲಿ ಏರಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ 11 ದಿನಗಳಲ್ಲಿ ಇಂಧನ ಬೆಲೆ ಪ್ರತಿ ಲೀಟರ್ ಗೆ ಸರಾಸರಿ 6.40 ರೂ. ಹೆಚ್ಚಾಗಿದೆ. ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ.