ಮೈಸೂರು(Mysuru): ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ಬಗ್ಗೆ ಸಾರ್ವಜನಿಕವಾಗಿ ಅವಹೇಳನ ಮಾಡಿರುವ ಚಿಂತಕ ಪ.ಮಲ್ಲೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದವರು ಇಲ್ಲಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.
ಜಾತಿ ನಿಂದನೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಕೋರಿದರು.
ಧಾರ್ಮಿಕ ಮುಖಂಡ ಭಾನುಪ್ರಕಾಶ್ ಶರ್ಮ, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಸಮಾಜದ ಮುಖಂಡರಾದ ಎಚ್.ವಿ.ರಾಜೀವ್, ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಆದರ್ಶ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜ್, ವಿಪ್ರ ವೃತ್ತಿಪರರ ವೇದಿಕೆಯ ಅಧ್ಯಕ್ಷ ಎಸ್.ಭಾಷ್ಯಂ, ಸುಧೀಂದ್ರ, ಕೆ.ಆರ್.ಸತ್ಯನಾರಾಯಣ, ರಾಕೇಶ್ ಭಟ್, ಎಚ್.ಜಿ.ಗಿರಿಧರ್, ಜಯಸಿಂಹ, ಶ್ರೀನಿವಾಸ್ ಪ್ರಸಾದ್, ಲತಾ ಮೋಹನ್, ವಿಜಯಕುಮಾರ್, ನಾಗೇಂದ್ರ ಬಾಬು, ಯೋಗ ನರಸಿಂಹ ಮುರಳಿ, ರಂಗನಾಥ್, ವಕೀಲರಾದ ಶೇಷಗಿರಿ, ವಿಪ್ರ ಮಹಿಳಾ ಸಂಘದ ಅಧ್ಯಕ್ಷ ಡಾ.ಲಕ್ಷ್ಮೀದೇವಿ, ಸೌಭಾಗ್ಯಾ ಮೂರ್ತಿ, ಕಡಕೋಳ ಜಗದೀಶ್, ವಿವೇಕಾನಂದ ಬ್ರಾಹ್ಮಣ ಸಂಘದ ಅಧ್ಯಕ್ಷ ಜಯರಾಮ್, ಓಂ ಶ್ರೀನಿವಾಸ್ ಇದ್ದರು.