ಮನೆ ರಾಜ್ಯ ಹೆಲಿರೈಡ್ ಮೂಲಕ ಸಂಪೂರ್ಣ ಮೈಸೂರು ದರ್ಶನ

ಹೆಲಿರೈಡ್ ಮೂಲಕ ಸಂಪೂರ್ಣ ಮೈಸೂರು ದರ್ಶನ

0

ಮೈಸೂರು(Mysuru):  ದಸರಾ ಹಬ್ಬ ಬಂತೆಂದರೆ ಮೈಸೂರು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ. ಕಾರಣ ಇಲ್ಲಿ ಹಲವಾರು ಮನರಂಜನೆ ನೀಡುವ ಕಾರ್ಯಕ್ರಮಗಳು ನಡೆಯುತ್ತದೆ. ಈ ಸಾಲಿಗೆ ಸೇರುವ ಮತ್ತೊಂದು ಅಂಶವೆಂದರೆ ಹೆಲಿಕಾಪ್ಟರ್ ರೈಡ್ ಎಂದು ಬೆಸ್ ಮ್ಯಾನೇಜರ್ ನಸ್ರೀನ್ ಖಾನ್ ಅವರ ಅಭಿಪ್ರಾಯ.

ಕೋವಿಡ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿ ಕುಳಿತು ಹಲವಾರು ಮನರಂಜನಾ ಕಾರ್ಯಕ್ರಮಗಳಿಂದ ವಂಚಿತರಾಗುತ್ತಿದ್ದರು. ಆದರೆ ಕೋವಿಡ್ ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ದಸಾರ ಮಹೋತ್ಸವದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ. ಇದರ ಅಂಗವಾಗಿಯೂ ಹೆಲಿಕಾಪ್ಟರ್ ರೈಡ್ ಕೂಡ ಆರಂಭವಾಗಿದ್ದು, ಇದನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.

ಮೈಸೂರಿನ ಜಯಚಾಮರಾ ಒಡೆಯರ್ ಹೆಲಿಪ್ಯಾಡ್ ಬಳಿ ಹೆಲಿಕಾಪ್ಟರ್ ರೈಡ್ ಸೆಪ್ಟೆಂಬರ್‌ 28 ರಿಂದ ಅಕ್ಟೋಬರ್ 05ರ ವರೆಗೆ ನಡೆಯುತ್ತದೆ. ತಲಾ ಒಬ್ಬರಿಗೆ 3,999 ರೂ ಟಿಕೇಟ್ ದರವನ್ನು ನಿಗಧಿ ಪಡಿಸಲಾಗಿದ್ದು, 2 ವರ್ಷದವರಿಗೆ ಉಚಿತವಾಗಿರುತ್ತದೆ.  ಹೆಲಿಕಾಪ್ಟರ್ ರೈಡ್ ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದ್ದು, ಭಾನುವಾರ ಮಾತ್ರ ಬೆಳಿಗ್ಗೆ 09 ರಿಂದ ಸಂಜೆ 06 ರವರೆಗೆ ನಡೆಯಲಿದೆ.

ಸಂಪೂರ್ಣ ಮೈಸೂರು ದರ್ಶನ:-  ಹೆಲಿರೈಡ್ ಮಾಡುವವರಿಗೆ ಇಡೀ ಮೈಸೂರಿನ ದರ್ಶನವಾಗಲಿದೆ. ರೈಡ್ ಮಾಡಿದ ಪ್ರತಿಯೊಬ್ಬರೂ ಖುಷಿಯಿಂದ ಹೊರಬಂದು ಇಂತಹ ಹೆಲಿರೈಡಿಂಗ್ ವರ್ಷಕ್ಕೆ ಎರಡರಿಂದ ಮೂರು ಬಾರಿ ನಡೆಯಬೇಕು. ಇದರಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.