ಮನೆ ಸುದ್ದಿ ಜಾಲ ಗ್ರಾಪಂಗಳಿಗೆ ಕೋವಿಡ್ ಪರಿಕರ ಪೂರೈಸಿದ ವ್ಯಕ್ತಿಯಿಂದ ದಯಾಮರಣ ಕೋರಿ ಪತ್ರ: ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಮನವಿ

ಗ್ರಾಪಂಗಳಿಗೆ ಕೋವಿಡ್ ಪರಿಕರ ಪೂರೈಸಿದ ವ್ಯಕ್ತಿಯಿಂದ ದಯಾಮರಣ ಕೋರಿ ಪತ್ರ: ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಮನವಿ

0

ಹುಬ್ಬಳ್ಳಿ(Hubballi): ಕೋವಿಡ್​ ತುರ್ತು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರಗಳನ್ನು ಪೂರೈಸುವ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬ  ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ.

 ಹುಬ್ಬಳ್ಳಿ ಮೂಲದ ಬಸವರಾಜ್ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿ

ಕಾನೂನು ಪ್ರಕಾರವೇ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಆತ ಪರಿಕರಗಳನ್ನು ಸಪ್ಲೈ ಮಾಡಿದ್ದ. ಸಾಮಗ್ರಿಗಳನ್ನು ಪೂರೈಸಿ ಎರಡು ವರ್ಷ ಗತಿಸಿದರೂ ಇದುವರೆಗೂ ಬಿಲ್ ಮಾತ್ರ ಪಾವತಿಯಾಗಿಲ್ಲ.

ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್, ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರ ಸರಬರಾಜು ಮಾಡಿದ್ದ ಎನ್ನಲಾಗಿದೆ. ಒಟ್ಟು 69 ಪಂಚಾಯಿತಿಗೆ ಪರಿಕರಗಳ ಸರಬರಾಜು ಮಾಡಿದ್ದರಂತೆ. 2020 – 21ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಪತ್ರದ ಅನುಸಾರ ಮೂಡಿಗೆರೆ ತಾಲೂಕಿಗೆ 27 ಲಕ್ಷ ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದನು. ಸರಬರಾಜು ಮಾಡಿ 2 ವರ್ಷ ಗತಿಸಿದರೂ ಬಿಲ್ ಪಾವತಿಯಾಗಿಲ್ಲ.

ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಲ್ ಪಾವತಿ ಮಾಡ್ತಿಲ್ಲ. ಕಡೂರು ಇಒ ದೇವರಾಜ್ ನಾಯಕ್ ಅವರಿಂದ ಕಮಿಷನ್ ಹಣಕ್ಕೆ ಬೇಡಿಕೆ ಆರೋಪ ಕೇಳಿಬಂದಿದೆ. ಬೇರೆ ಬೇರೆಯವರ ಹೆಸರಲ್ಲಿ ಬಿಲ್​ನ ಒಟ್ಟು 40 ಪರ್ಸಂಟೇಜ್​ಗಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಾಲ ಸೋಲ ಮಾಡಿ ಸಾಮಾಗ್ರಿ ಪೂರೈಸಿದ್ದೇನೆ. ನಾನೆಲ್ಲಿಂದ ಹಣ ಕೊಡಲಿ ಎಂದು ಬಸವರಾಜ್ ಪ್ರಶ್ನಿಸುತ್ತಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗುತ್ತಿಗೆದಾರ ಬಸವರಾಜ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾರ್ಯಾಲಯದಿಂದ ಆದೇಶ ಬಂದರೂ ಡೋಂಟ್ ಕೇರ್ ಅಂತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನಿರ್ದೇಶನ ನೀಡಿದರೂ ಬಿಲ್ ಬಿಡುಗಡೆಯಾಗಿಲ್ಲ.ಇದರ ನಡುವೆ ಸಾಲಗಾರರ ಕಾಟ ಹೆಚ್ಚಾಗಿದೆ. ಕೊನೆಗೆ ದಯಾಮರಣದ ಮೊರೆ ಹೋಗುತ್ತಿರುವುದಾಗಿಯೂ ದೂರುದಾರರು ತಿಳಿಸಿದ್ದಾರೆ.

ಹಿಂದಿನ ಲೇಖನಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಕಣ್ಣೂರು ಶ್ರೀ ಸೇರಿ ಮೂವರಿಗೆ 14 ದಿನ ನ್ಯಾಯಾಂಗ ಬಂಧನ
ಮುಂದಿನ ಲೇಖನನಾನು ಏಕ್ತಾ ನಗರದಲ್ಲಿದ್ದರೂ, ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ: ಪ್ರಧಾನಿ ಮೋದಿ