ಮನೆ ರಾಜ್ಯ ಕಂಪ್ಲಿ: ಸೋಮಪ್ಪನ ಕೆರೆಯಲ್ಲಿ ಮೀನುಗಾರರ ಬಲೆಗೆ ಬಿದ್ದ ಮೊಸಳೆ

ಕಂಪ್ಲಿ: ಸೋಮಪ್ಪನ ಕೆರೆಯಲ್ಲಿ ಮೀನುಗಾರರ ಬಲೆಗೆ ಬಿದ್ದ ಮೊಸಳೆ

0

ಕಂಪ್ಲಿ: ಪಟ್ಟಣದ ಐತಿಹಾಸಿಕ ಸೋಮಪ್ಪನ ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.ಈ ಬಗ್ಗೆ ಪುರಸಭೆಯವರು ಕೆರೆಯಲ್ಲಿ ಮೊಸಳೆಯೊಂದು ಇದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಬ್ಯಾನರ್ ಅಳವಡಿಸಿದ್ದರು. ಜೊತೆಗೆ ಅರಣ್ಯ ಇಲಾಖೆಗೆ ಮೊಸಳೆ ಸೆರೆಗೆ ಮನವಿ ಮಾಡಿದ್ದರು.

Join Our Whatsapp Group

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೊಸಳೆ ಸೆರೆಗೆ ಬಲೆ ಮತ್ತು ದಂಡೆಯಲ್ಲಿ ಸತ್ತ ಕೋಳಿಗಳನ್ನು ಹಾಕಿ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಎರಡು ದಿನಗಳಾದರು ಮೊಸಳೆ ಸೆರೆಯಾಗಿರಲಿಲ್ಲ. ಇಂದು ಕಂಪ್ಲಿ ಕೋಟೆಯ ಮೀನುಗಾರ ಸಹಕಾರ ಸಂಘದವರು ಕೆರೆಯಲ್ಲಿನ ಮೀನುಗಳನ್ನು ಹಿಡಿಯಲು 15ಕ್ಕೂ ಅಧಿಕ ಹರಗೋಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಲೆಗಳನ್ನು ಬಳಸಿದ್ದರಿಂದ ಮೊಸಳೆ ಬಲೆಗೆ ಬಿದಿದ್ದು, ನಂತರ ಮೊಸಳೆಯನ್ನು ಹಗ್ಗದಿಂದ ಬಂಧಿಸಿ ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಿ.ರಾಘವೇಂದ್ರ ಮತ್ತು ಬಿ.ನಾಗರಾಜ ಅವರಿಗೆ ಒಪ್ಪಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಮೊಸಳೆಯನ್ನು ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಜುಯಲಾಜಿಕಲ್ ಪಾಕ್೯ಗೆ ಸ್ಥಳಾಂತಿಸಿದರು.

ಹಿಂದಿನ ಲೇಖನಕೊಡಗು, ನಾಗರಹೊಳೆಯಲ್ಲಿ ಭಾರೀ ಮಳೆ:  ಹನಗೋಡು ಅಣೆಕಟ್ಟೆ ಭರ್ತಿ
ಮುಂದಿನ ಲೇಖನಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವೇತನ ಹೆಚ್ಚಿಸಿ ಆದೇಶ