ಮನೆ ಸುದ್ದಿ ಜಾಲ ಗಡಿ ಭಾಗದ ಸಮಗ್ರ ಅಭಿವೃದ್ಧಿ ನಮ್ಮ ಹೊಣೆ: ಡಾ. ಸಿ ಸೋಮಶೇಖರ್

ಗಡಿ ಭಾಗದ ಸಮಗ್ರ ಅಭಿವೃದ್ಧಿ ನಮ್ಮ ಹೊಣೆ: ಡಾ. ಸಿ ಸೋಮಶೇಖರ್

0

ಮೈಸೂರು(Mysuru): ಗಡಿ ಭಾಗದ ಸಮಗ್ರ ಅಭಿವೃದ್ದಿ ನಮ್ಮ ಹೊಣೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಗಡಿಭಾಗದ ಜನರು ಬೇರೆಡೆ ಹೋಗಿ ಜೀವನ ಕಟ್ಟಿಕೊಳ್ಳಲು ಮನಸು ಮಾಡಬಾರದು, ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆಗಳು ಸಮರ್ಪಕವಾಗಿ ಅವರಿಗೆ ತಲುಪಿವೆಯೇ ಎಂಬ ಬಗೆಗೆ ತಿಂಗಳಿಗೆ ಒಮ್ಮೆಯಾದರೂ ಹೋಗಿ ಪರಿಶೀಲನೆ ನಡೆಸಬೇಕೆಂದು ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಹೇಳಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳು ಗಡಿ ಭಾಗದ ಜನರ ಅಭಿವೃದ್ದಿಗೆ ಹಾಕಿಕೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗಡಿ ಭಾಗದ ಜನರ ಪ್ರಾದೇಶಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ವಿಶೇಷವಾಗಿ 8 ವಿಶ್ವವಿದ್ಯಾಲಯಗಳ ಮೂಲಕ ಗಡಿ ಭಾಗದ 63 ತಾಲೋಕುಗಳ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಮಾಡಲಾಗುತಿದ್ದು ಅಸಮತೋಲನ ಕಂಡುಬರುವ ಕಡೆ ಪ್ರಾಧಿಕಾರ ಹಾಗೂ ಸರ್ಕಾರದ ಮೂಲಕ ಗಡಿ ಜನರ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದರು.

ಗಡಿಭಾಗದ ಕನ್ನಡ ಶಾಲೆಗಳಿಗೆ ಶಾಲಾ ಕಟ್ಟಡ, ಪಾಠೋಪಕರಣ, ಪೀಠೋಪಕರಣ,ಕಾಂಪೋಂಡ್ ಗೋಡೆ ನಿರ್ಮಾಣ, ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಆರ್ಥಿಕ ಇತಿಮಿತಿಯೊಳಗೆ ಅನುದಾನ ಒದಗಿಸಲಾಗುವುದು, ಸಾಂಸ್ಕೃತಿಕ ಮತ್ತು ಪ್ರಗತಿ ಏಕಕಾಲಕ್ಕೆ ಸಾಗಬೇಕು ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು ಹಾಗಾಗಿ ಖಾಸಗಿ ಸಂಸ್ಥೆಗಳಿಗೂ ಸಾಂಸ್ಕçೃತಿಕ ಭವನಗಳಿಗೆ ಅನುದಾನ ನೀಡಲಾಗುವುದೆಂದರು.

ಗಡಿಭಾಗದ ಕನ್ನಡಿಗರ ಅಸ್ಮಿತೆ, ವಿಕಾಸಗೊಳ್ಳಲು ಗಡಿಭಾಗದ ವ್ಯಾಪ್ತಿಗೊಳಪಡುವ 19 ಜಿಲ್ಲೆ 63 ತಾಲ್ಲೋಕುಗಳ 980 ಹಳ್ಳಿಗಳು ನೆರೆಯ 6 ರಾಜ್ಯಗಳೊಂದಿಗೆ ಗಡಿ ಹಂಚಿಕೊAಡಿದ್ದು ಈ ಭಾಗಗಳ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಪ್ರಾಧಿಕಾರ ಬದ್ದವಾಗಿದೆ ಎಂದರು.

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೋಕಿನ ಕೆಲ ಹಳ್ಳಿಗಳು ಗಡಿ ಭಾಗದಲ್ಲಿದ್ದು ಈ ಪ್ರದೇಶಗಳ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿಗಾಗಿ ವಿವಿಧ ಇಲಾಖೆಗಳಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಹೆಚ್.ಡಿ ಕೋಟೆ ನಾಲ್ಕು ಪಂಚಾಯಿತಿ ವ್ಯಾಪ್ತಿಯ ಶಾಲೆಗಳ ಸ್ಥಿತಿಗತಿ, ಆರೋಗ್ಯ ಸ್ಥಿತಿಗತಿ, ಅನ್ಯ ಭಾಷೆಯ ಶಾಲೆಗಳಿಗೆ ಮಕ್ಕಳು ಹೋಗುತಿದ್ದಾರೆಯೇ ಎಂಬ ವರದಿ ತರಿಸಿಕೊಳ್ಳಲಾಗುವುದು, ಉದ್ಯೋಗ ಅರಸಿ ಬೇರೆಡೆಗೆ ಹೋದರೆ ತೊಂದರೆಯಿಲ್ಲ, ಉದ್ಯೋಗವಿಲ್ಲದೆ ಉದ್ಯೋಗಕ್ಕಾಗಿ ಬೇರೆಡೆಗೆ ಹೋಗಬಾರದು, ಆ ಭಾಗದ ಗಿರಿಜನರ ಅಭಿವೃದ್ದಿಗಾಗಿ ಸರ್ಕಾರಿ ಶಾಲೆಗಳು, ಆಶ್ರಮ ಶಾಲೆಗಳು, ಗಿರಿಜನ ಶಾಲೆಗಳ ಅಭಿವೃದ್ದಿ ಮಾಡಲಾಗುತ್ತಿದೆ ಹಾಗೂ ಕೌಶಲಾಭಿವೃದ್ದಿ ತರಬೇತಿಗಳನ್ನು ನೀಡುವುದರ ಮೂಲಕ ತರಬೇತುಗೊಳಿಸಲಾಗುತ್ತಿದೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಭಾಗವಾಗಿ ರಂಗಾಯಣದ ನಾಟಕಗಳನ್ನೂ ಈ ಭಾಗದಲ್ಲಿ ಪ್ರಸ್ತುತ ಪಡಿಸಲಾಗುವುದೆಂದರು.

ಗ್ರಾಮ ಪಂಚಾಯಿತಿ, ತಾಲ್ಲೋಕು ಪಂಚಾಯತಿ, ಜಿಲ್ಲಾಪಂಚಾಯತಿಗಳಲ್ಲಿ ಸಾಂಸ್ಕçೃತಿಕ ನಿಧಿ ಸ್ಥಾಪನೆ ಮಾಡಿ ಗಡಿ ಜನರ ಸಾಂಸ್ಕೃತಿಕ ಕಲೆಗಳನ್ನು ಉಳಿಸಲು ಪ್ರಯತ್ನಿಸಬೇಕು ಕರ್ನಾಟಕ ಸರ್ಕಾರ ಈಗಾಗಲೇ ಹೊರರಾಜ್ಯಗಳ ಗಡಿ ಭಾಗಗಳಲ್ಲಿ ಗೋವ, ಕಾಸರಗೋಡು ಹಾಗೂ ಅಕ್ಕಲ ಕೋಟೆಗಳಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲು ಉದ್ದೇಶಿಸಿದೆ ಎಂದರು.

ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಗಿರಿಜನರ ಉತ್ಸವಗಳನ್ನು ಆಯೋಜಿಸು ಮೂಲಕ ಗಿರಿಜನ ಕಲಾವಿದರುಗಳಿಗೆ ಅವಕಾಶ ಹಾಗೂ ಸಂಭಾವನೆ ಸಿಗುವಂತೆ ನೋಡಿಕೊಳ್ಳಬೇಕೆಂದರು.

ರಾಜ್ಯದ ಗಡಿ ಭಾಗಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಿ, ಅದರಿಂದ ಹೊರರಾಜ್ಯಗಳಿಂದ ಬರುವವರಿಗೆ ನಮ್ಮ ರಾಜ್ಯದ ವಿಶಿಷ್ಟತೆ ತಿಳಿಯುತ್ತದೆ. ಪ್ರಾಧಿಕಾರ ಹಾಗೂ ನರೇಗಾದಿಂದ ಹಣ ಭರಿಸಲಾಗುವುದು, ಬೇರೆ ರಾಜ್ಯಗಳವರು ನಿರ್ಮಿಸಿದಂತೆ ವೈಭವಯುತವಾಗಿ ಸ್ವಾಗತ ಕಮಾನುಗಳಿರಲಿ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲಾಮಟ್ಟದ ಅಧಿಕಾರಿಗಳು ಎರಡೂ ತಾಲೋಕುಗಳ ಗಡಿ ಭಾಗದ ಸಮಸ್ಯೆಗಳಿಗೆ ಒತ್ತು ಕೊಟ್ಟು ಅವರ ಸಂಸ್ಕೃತಿ ಭಾಷೆ ಉಳಿಸಲು, ಅವರಿಗೆ ಬೇರೆಕಡೆ ಇದ್ದರೆ ಚನ್ನಾಗಿತ್ತು ಎಂಬ ಭಾವನೆ ಬರದಂತೆ ನೋಡಿಕೊಳ್ಳಿ. ಗಿರಿಜನರ ಹಾವಭಾವ ಊಟದ ಪದ್ದತಿ,ಜೀವನ ಶೈಲಿ ಮುಂತಾದವುಗಳ ದಾಖಲಿಸಿ ಡಾಕ್ಯೂಮೆಂಟ್ರಿ ಮಾಡುವತ್ತ ಗಮನಹರಿಸಿ ಎಂದರು.

ವಿಮಾನ ನಿಲ್ದಾಣಗಳಲ್ಲಿ ಗಣ್ಯರನ್ನು ಸ್ವಾಗತಿಸಿವಾಗ ಯಕ್ಷಗಾನದಂತಹ ಕಲೆಗಳೊಂದಿಗೆ ಗಿರಿಜನರ ನೃತ್ಯಗಳನ್ನು ಏರ್ಪಡಿಸಲು ಪ್ರಾಧಿಕಾರ ಮುಂದಾಗಬೇಕೆಂದರು.

ಜಿ.ಪಂ.ಸಿಇಒ ಪೂರ್ಣಿಮ ಮಾತನಾಡಿ ಈ ಬಾಗದಲ್ಲಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕುಡಿಯುವ ನೀರು, ರಸ್ತೆ,ಚರಂಡಿ,ನರೇಗಾ ಕಾಮಗಾರಿಗಳು,ಸೋಲಾರ್ ಲ್ಯಾಂಪ್, ಘನತ್ಯಾಜ್ಯ ನಿರ್ವಹಣಾ ಘಟಕ, ಸ್ಮಶಾನ ಅಭಿವೃದ್ದಿ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ, ಪ್ರಾಧಿಕಾರದ ಕಾರ್ಯದರ್ಶಿ,ಪ್ರಕಾಶ್ ಮತ್ತೀಹಳ್ಳಿ, ಉಪವಿಭಾಗಾಧಿಕಾರಿಗಳಾದ ರುಚಿ ಜಿಂದಾಲ್,ಕಮಲಾಬಾಯಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಹಿಂದಿನ ಲೇಖನಐಪಿಎಲ್‌ 2023: ಹರಾಜಿಗೆ ಲಭ್ಯರಿರುವ ಆಟಗಾರರ ಪಟ್ಟಿ ಬಿಡುಗಡೆ
ಮುಂದಿನ ಲೇಖನಚಿತ್ರದುರ್ಗದ ಮುರುಘಾ ಮಠದ ಟ್ರಸ್ಟ್‌ ಮತ್ತು ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿಯಾಗಿ ಪಿ.ಎಸ್‌.ವಸ್ತ್ರದ್‌ ನೇಮಕ