ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚುವ ಸಲುವಾಗೊ ತಂದಿದ್ದ ಚಿನ್ನ ಲೇಪಿತ 1 ಕೋಟಿ 47 ಲಕ್ಷ ರೂ ಮೌಲ್ಯದ ಆಭರಣಗಳನ್ನು ಹಲಸೂರು ಠಾಣಾ ಪೊಲೀಸರು ಜಪ್ತಿ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಂಕಜ್ ಗೌಡ, ಭಗವಾನ್ ಸಿಂಗ್ ಹಾಗೂ ವಡಿವೇಲು ಬಂಧಿತ ಆರೋಪಿಗಳು.
ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಲು ತಂದಿದ್ದ ಆಭರಣಗಳ ಬಗ್ಗೆ ಚುನಾವಣಾಧಿಕಾರಿ ಮುನಿಯ ನಾಯಕ ಹಲಸೂರು ಠಾಣೆಗೆ ದೂರು ನೀಡಿದ್ದರು.
ಆ ಮೇರೆಗೆ ನಿನ್ನೆ ಸಂಜೆ ದಾಳಿ ನಡೆಸಿದ ಎಸಿಪಿ ರಾಮಚಂದ್ರ, ಇನ್ಸ್ ಪೆಕ್ಟರ್ ಹರೀಶ್ ಬಾಬು ಹಾಗೂ ಸಬ್ ಇನ್ಸ್ ಪೆಕ್ಟರ್ ಮಧುರನ್ನೊಳಗೊಂಡ ತಂಡ 8.50ಗ್ರಾಂ ತೂಕದ ಗೋಲ್ಡ್ ಕೋಟೆಡ್ ಸರ, ಉಂಗುರ, ಕಿವಿಯೋಲೆ, ಬ್ರೇಸ್ ಲೇಟ್, ಬಳೆಗಳು ಸೇರಿದಂತೆ 1 ಕೋಟಿ 47 ಲಕ್ಷ ಮೌಲ್ಯದ ಚಿನ್ನಲೇಪಿತ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.