ಮನೆ ಆರೋಗ್ಯ ಹುಟ್ಟಿನಿಂದಲೇ ಬರುವ ದೋಷಗಳು

ಹುಟ್ಟಿನಿಂದಲೇ ಬರುವ ದೋಷಗಳು

0

ಕೆಲವು ಮಕ್ಕಳಿಗೆ ಹುಟ್ಟಿದಾಗಲೇ ಹಲವು ದೋಷಗಳಿರುತ್ತದೆ. ಅವು ಅವರ ಭವಿಷ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಅಂತಹವರ ಬದುಕು ದೊಡ್ಡವರಾದ ಮೇಲೆ ದುರ್ಬರವಾಗುತ್ತದೆ. ಮಾನಸಿಕ ಮತ್ತು ಶಾರೀರಿಕ ದೋಷಗಳು ತೀವ್ರವಾಗಿರುವವು ಅವರ ಕೆಲಸಗಳನ್ನ ಕೂಡ ಅವರು ಮಾಡಿಕೊಳ್ಳಾಲಾರರು. ಎಲ್ಲದಕ್ಕೂ ಇತರರ ಮೇಲೆ ಅವಲಂಭಿಸಿರುತ್ತಾರೆ. ಕೆಲವರಿಗೆ ಮಾತು ಬರದು. ಬಂದರೂಸರಿಯಾಗಿ ಮಾತನಾಡಲಾರರು. ಕೆಲವರಿಗೆ ಶ್ರವಣದೋಷ, ದೃಷ್ಟಿದೋಷಗಳು ಹುಟ್ಟಿನಿಂದಲೇ ಇರುತ್ತದೆ. ಇವು ಒಂದು ಕಡೆಯಾದರೆ ಕಲಿಯುವ ವಿಷಯದಲ್ಲಿ ಕೂಡ ಹಿಂದುಳಿದಿರುತ್ತಾರೆ. ತಿಳಿವಳಿಕೆ ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲ. ಈ ರೀತಿಯಾಗಲೂ ಹುಡ್ಡಿದಾಗಲೇ ಅವರಲ್ಲಿರುವ ದೋಷಗಳು ಕಾರಣವಾಗುತ್ತದೆ. ಇಂತಹ ಸ್ಥಿತಿಯನ್ನು ಡೆವಲಪ್ ಮೆಂಟಲ್ ಡಿಸ್ ಎಬಿಲಿಟಿ ಎನ್ನುತ್ತಾರೆ.

ಡೆವಲಪ್ ಮೆಂಟಲ್ ಡಿಸೆಬಿಲಿಟೀಸ್ :-

 ಈ ಸಮಸ್ಯೆ ಕೆಲವರಲ್ಲಿ ಒಂದೇ ವಿಷಯದಲ್ಲಿರಬಹುದು. ಮತ್ತೆ ಕೆಲವರಲ್ಲಿ 3-4 ವಿಷಯಗಳಲ್ಲಿರಬಹುದು. ಈ ದೋಷಗಳು ಕೆಲವರಲ್ಲಿ ಕಡಿಮೆಯಿದ್ದರೆ ಇನ್ನೂ ಕೆಲವರಲ್ಲಿ ಹೆಚ್ಚಾಗಿರುತ್ತದೆ.

ಶಾರೀರಿಕ ಮತ್ತು ಮಾನಸಿಕ ದೋಷಗಳು :-

ಮಗು ಗರ್ಭಾದಲ್ಲಿದ್ದಾಗಲೇ ಕೆಲವು ದೋಷಗಳಿವೆ ನಾಂದಿಯಾಗುತ್ತದೆ. ವಿಚಕ್ಷಣೆಯಿಲ್ಲದೆ ಕೆಲವು ಔಷಧಿಗಳನ್ನ ಸೇವಿಸುವುದು, ಕೆಲವು ರಾಸಾಯನಿಕ ಪದಾರ್ಥಗಳ ಪ್ರಭಾವಕ್ಕೊಳಗಾಗುವುದು ಇದಕ್ಕೆ ಮುಖ್ಯಕಾರಣ. ಗರ್ಭದಲ್ಲಿ ಮಗು ಬೆಳೆಯುತ್ತಿರುವ ಕೊನೆಯ ತಿಂಗಳುಗಳಲ್ಲಿ ಕೂಡ ಕೆಲವು ಕಾಎಣಗಳಿಂದಮಗುವಿನಲ್ಲಿ ಮಾನಸಿಕ ಮತ್ತು ಶಾರೀರಿಕ ಲೋಪಗಳಾಗುತ್ತದೆ. ಕಾರಣಾಂತರದಿಂದ ಗರ್ಭದಲ್ಲಿರುವ ತೂಕ ನಿಗದಿತ ಮಟ್ಟ್ಕ್ಕೆ ಏರಿಕೆಯಾಗುವುದಿಲ್ಲ. ಇದನ್ನು ಇಂಟ್ರಾ ಯುಟೀರೈಸ್ ಗ್ರೋತ್ ರಿಟಾರ್ಡೇಷನ್ (ಐ.ಯು.ಜಿ.ಆರ್) ಎನ್ನುತ್ತಾರೆ. ಐಯುಜಿಆರ್ ಇದ್ದಾಗ ಮಗುವಿನಲ್ಲಿ ಕೆಲವು ಶಾಶ್ವತ ದೋಷಗಳುಂಟಾಗುತ್ತದೆ.

ಹೆರಿಗೆಯ ಮುಂಚೆ ಮತ್ತು ಹೆರಿಗೆಯ ಸಮಯದಲ್ಲಿ ಕಂಡುಬರುವ ಕೆಲವು ಜಟಿಲತೆಗಳು ಮಗುವಿನ ಬೆಳವಣಿಗೆ ಕುಂಠಿತವಾಗಳು ಕಾರಣವಾಗುತ್ತದೆ. ತಾಯಿಗೆ ಕುದುರೆವಾತ ಬಂದರೆ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಹೆರಿಗೆಯಾಗುವುದು ತಡವಾದರೆ, ಮಗು ಕಡಿಮೆ ತೂಕದೊಂದಿಗೆ ಹುಟ್ಟಿದರೆ, ಅವದಿಗೆ ಮುನ್ನ ಮಗುವಿನ ಜನನವಾದರೆ, ಮಗು ಹುಟ್ಟುತ್ತಿದ್ದಂತೆ ಕಾಮಾಲೆ ತೀವ್ರವಾಗಿದ್ದರೆ ಅದು ಮಗುವಿನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡುತ್ತದೆ. ಶಾರೀರಿಕಮತ್ತು ಮಾನಸಿಕ ದೋಷಗಳಿಗೆ ಮೂಲ ಕಾರಣವಾಗುತ್ತದೆ.

ಮಗು ಹುಟ್ಟಿದಾಗ ಎಲ್ಲಾ ಸರಿಯಾಗಿದ್ದರೂ ಕೂಡ ನಂತರ ಮೆದುಳು ಬಾವು ಬಂದರೆ, ಮಗು ಕೆಳಗೆ ಬಿದ್ದು ಪೆಟ್ಟಾದರೂ ಕೂಡ ಮಗುವಿನ ಭವಿಷ್ಯ ಹಾಳಾಗುತ್ತದೆ.

ಪೌಷ್ಟಿಕ ಆಹಾರದ ಕೊರತೆ ಮತ್ತು ವೈದ್ಯಕೀಯ ದೋಷಗಳು ಕೂಡ ಮಗುವಿನ ಬೆಳವಣಿಗೆ ಮೇಲೆ ಪ್ರಭಾವವನ್ನುಂಟುಮಾಡುತ್ತದೆ.

ಚಿಕ್ಕಂದಿನಲ್ಲಿಯೇ ದೋಷಗಳನ್ನು ಗುರುತಿಸುವುದು :-

ಕೆಲವು ಲೋಪಗಳನ್ನು ಮಗು ಹುಟ್ಟಿದ ಮೊದಲ ತಿಂಗಳಿನಲ್ಲಿಯೇ ಗುರುತಿಸಬಹುದು. ಮಗುವಿನ ಸ್ನಾಯುಗಳು ಬಿಗಿದುಕೊಂಡಿರಬಹುದು, ತಾಯಿಯ ಹಾಲನ್ನು ಸರಿಯಾಗಿ ಕುಡಿಯಲು ಸಾಧ್ಯವಾಗದಿರಬಹುದು, ಶಬ್ದಕ್ಕೆ, ಬೆಳಕಿಗೆ ಪ್ರತಿಕ್ರಿಯಿಸದೆ ಇರಬಹುದು. ಮಲಗುವುದರಲ್ಲಿ, ಕೈಕಾಲುಗಳ ಚಲನೆಯಲ್ಲಿ ಅಸಹಜತೆ ಕಾಣಬಹುದು. ಈ ಎಲ್ಲಾ ಲಕ್ಷಣಗಳು ಅವಲೋಕಿಸಿದಾಗ ಮಗುವಿನಲ್ಲಿ ಡೆವಲಪ್ ಮೆಂಟ್ ಡಿಸೆಬಿಲಿಟೀಸ್ ಇದೆಯೆಂದು ಗುರುತಿಸಬಹುದು.             

ಕೆಲವು ಮಕ್ಕಳಲ್ಲಿ ಡೆವಲಪ್ ಮೆಂಟ್ ಡಿಸೆಬಿಲಿಟೀಸ್ ಹುಟ್ಟಿದ ಕೆಲವು ದಿನಗಳಲ್ಲಿ ಗೋಚರವಾಗದಿದ್ದರೂ, ವರ್ಷ ತುಂಬುವಷ್ಟರಲ್ಲಿ ದೋಷ ತುತ್ತಾಗುತ್ತದೆ. ಆಯಾಮ ತಿಂಗಳಿಗೆ ಅವರಲ್ಲಿರಬೇಕಾದ ಬೆಳವಣಿಗೆಯ ವೇಗ ಸ್ಪಷ್ಟವಾಗಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅವರು ಕೂಡ ಹಾಗೆ ನೋಡುತ್ತಾರೆ. ಆದರೆ ಡೆವಲಪ್ ಮೆಂಟ್ ಡಿಸಬಿಲಿಟೀಸ್ ಇರುವ ಮಕ್ಕಳಲ್ಲಿ ಇದನ್ನು ನಿರೀಕ್ಷಿಸಲಾಗುವುದಿಲ್ಲ. ಹಾಗೆ ದೊಡ್ಡವರು ನಗಿಸಿದರೆ, ಮುದ್ದಿಸಿದರೆ ಸ್ಪಂದಿಸಲಾರದು.      

2-3 ವರ್ಷಗಳ ನಂತರ ಅವರಲ್ಲಿನ ಡೆವಲಪ್ ಮೆಂಟ್ ಡಿಫೆಕ್ಟ್ ಮತ್ತಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ. ಮಾತುಗಳು ಸ್ಪಷ್ಟವಾಗಿರುವುದಿಲ್ಲ. ವರ್ತನೆಯಲ್ಲಿ ವ್ಯತ್ಯಾಸವಿರುತ್ತದೆ. ಯಾರಿಗೆ ಮಕ್ಕಳಲ್ಲಿ ಹೋಲಿಸಿದರೆ ಇವರಲ್ಲಿನ ದೋಷ ಎದ್ದು ಕಾಣುತ್ತದೆ. ಶಾಲೆಗೆ ಸೇರಿಸಿದರೆ ಕಲಿಯುವಿಕೆಯಲ್ಲಿ ಹಿಂದುಳಿದಿರುತ್ತಾರೆ. ಜೊತೆಯ ಮಕ್ಕಳೊಂದಿಗೆ ಇವರ ವರ್ತನೆ ವಿಲಕ್ಷಣವಾಗಿರುತ್ತದೆ.

ಮೇಲೆ ಹೆಸರಿಸಿದಂತೆ ಇವರಲ್ಲಿ ದೋಷಗಳು ಕಂಡುಬರುತ್ತದೆ. ಇವರಿಗೆ ನರಗಳು ಮತ್ತು ಮೆದುಳಿನ ಕಾರ್ಯವೈಕರಿಯಲ್ಲಿ ವ್ಯತ್ಯಾಸ, ಸ್ನಾಯುಗಳ ವ್ಯವಸ್ಥೆ ನರಗಳು ಮತ್ತು ಸ್ನಾಯುಗಳ ಹೊಂದಾಣಿಕೆಯಿಲ್ಲದಿರುವುದು – ಹೀಗೆ ಹಲವಾರು ನ್ಯೂನ್ಯತೆಗಳಿರುತ್ತದೆ.

-ಮುಂದುವರೆಯುತ್ತದೆ.