ಮನೆ ರಾಜ್ಯ ಸ್ಪಿಂಕ್ಲರ್ ಸಬ್ಸಿಡಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರ: ಬಿ.ಸಿ.ಪಾಟೀಲ್ ಕಿಡಿ

ಸ್ಪಿಂಕ್ಲರ್ ಸಬ್ಸಿಡಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರ: ಬಿ.ಸಿ.ಪಾಟೀಲ್ ಕಿಡಿ

0

ಬೆಂಗಳೂರು/ಹಾವೇರಿ: ಕಾಂಗ್ರೆಸ್ ಸರ್ಕಾರ ಸ್ಪಿಂಕ್ಲರ್ ಸಬ್ಸಿಡಿಗೆ ಕತ್ತರಿ‌ ಹಾಕಿ ರೈತರಿಗೆ ಅನ್ಯಾಯವೆಸಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

ಹಿಂದಿನ ನಮ್ಮ ಬಿಜೆಪಿ ಸರ್ಕಾರದಲ್ಲಿ 90%ರಷ್ಟು ಸ್ಪಿಂಕ್ಲರ್ ಸೆಟ್ಗೆ ಸಬ್ಸಿಡಿ ನೀಡಲಾಗಿತ್ತು.

ಸ್ಟ್ರಿಂಕ್ಲರ್‌ ಪೈಪ್‌ ಬಳಕೆಯಿಂದ ಇಳುವರಿ ಹೆಚ್ಚಳ, ನೀರು ಉಳಿತಾಯ ಹಾಗೂ ಶ್ರಮ ಕಡಿಮೆಯಾಗಿ  ಸ್ಟ್ರಿಂಕ್ಲರ್‌ ಪೈಪ್‌ಗೆ ಬಾರಿ ಬೇಡಿಕೆ ಬಂದಿತ್ತು. ಶೇ.90ರ ಸಬ್ಸಿಡಿಯಲ್ಲಿ ಪೈಪ್‌ ಸೆಟ್‌ ಲಭಿಸಿ, 2 ಇಂಚಿನ ಸ್ಟ್ರಿಂಕ್ಲರ್‌ಗೆ 1,746 ರೂ., 2.5 ಇಂಚಿನ ಪೈಪ್‌ಗೆ 1876 ರೂ. ರೈತರು ಪಾವತಿಸಬೇಕಾಗಿತ್ತು.ಆದರೆ ಈಗಿನ ಕಾಂಗ್ರೆಸ್ ಸರ್ಕಾರ ರೈತರ ಜೇಬಿಗೆ ಕತ್ತರಿಹಾಕಲೆಂದೇ ಸ್ಪಿಂಕ್ಲರ್ ಸೆಟ್ ಮೊತ್ತವನ್ನು ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ.

ಕಾಂಗ್ರೆಸ್ ಸರ್ಕಾರ ಸಬ್ಸಿಡಿ ತಗೆದು  2ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4139 ರೂ ಹಾಗೂ 2.5ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4567 ರೂಪಾಯಿ ಮಾಡಿ ಈ ಸರ್ಕಾರ ರೈತರ ದುಡ್ಡಿನಲ್ಲಿಯೇ ಗ್ಯಾರಂಟಿ ಭಾಗ್ಯಗಳನ್ನು ನೀಡಿ ರೈತರ ದುಡ್ಡಿನಲ್ಲಿಯೇ ಸರ್ಕಾರ ನಡೆಸುತ್ತಿರುವುದು ರೈತರಿಗೆ ಒಂದು ದೊಡ್ಡ ಅನ್ಯಾಯ. ಇದು ಗ್ಯಾರೆಂಟಿಗಳ ಸರ್ಕಾರ ಅಲ್ಲ,ರೈತರಿಗೆ ಅನ್ಯಾಯವೆಸಗುತ್ತಿರುವ ಸರ್ಕಾರ ಎಂದು ಪತ್ರಿಕಾ ಪ್ರಕಟಣೆ ಮೂಲಕ ಬಿ ಸಿ ಟೀಲ್ ತಿಳಿಸಿದ್ದಾರೆ.