ಮನೆ ರಾಷ್ಟ್ರೀಯ ಭಾರತದ ಜನರನ್ನು ಹೆದರಿಸಲು ಕಾಂಗ್ರೆಸ್ ಯತ್ನ: ಪ್ರಧಾನಿ ನರೇಂದ್ರ ಮೋದಿ

ಭಾರತದ ಜನರನ್ನು ಹೆದರಿಸಲು ಕಾಂಗ್ರೆಸ್ ಯತ್ನ: ಪ್ರಧಾನಿ ನರೇಂದ್ರ ಮೋದಿ

0

ಭುವನೇಶ್ವರ್ (ಒಡಿಶಾ ) : ಪಾಕಿಸ್ತಾನ ಪರಮಾಣು ಬಾಂಬ್‌ ಗಳನ್ನು ಹೊಂದಿದೆ ಎಂದು ಹೇಳುವ ಮೂಲಕ ಭಾರತದ ಜನರನ್ನು ಹೆದರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Join Our Whatsapp Group

ಒಡಿಶಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಪಕ್ಷದ ಅಂತಹ ದುರ್ಬಲ ಮನೋಭಾವವು ಈ ಹಿಂದೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿತು ಎಂದಿದ್ದಾರೆ .

 ಕಾಂಗ್ರೆಸ್ ನಿರಂತರವಾಗಿ ತನ್ನದೇ ದೇಶವನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ‘ಎಚ್ಚರಿಕೆ, ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ’ ಎಂದು ಅವರು ಹೇಳುತ್ತಾರೆ. ಈ ದುರ್ಬಲರು ಭಾರತದ ಆತ್ಮವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ಅಂತಹ ಮನೋಭಾವವನ್ನು ಹೊಂದಿತ್ತು. ಪಾಕಿಸ್ತಾನ ತಮ್ಮ ಸ್ವಂತ ಬಾಂಬ್‌ಗಳನ್ನು ಸಹ ನಿಭಾಯಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಅವರು ತಮ್ಮ ಬಾಂಬ್‌ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಕಳಪೆ ಗುಣಮಟ್ಟದ ಕಾರಣದಿಂದ ಯಾರೂ ಖರೀದಿಸಲು ಬಯಸುವುದಿಲ್ಲ. ಕಾಂಗ್ರೆಸ್ ಪಕ್ಷದ  ದುರ್ಬಲ ಧೋರಣೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಆರು ದಶಕಗಳಿಂದ ಭಯೋತ್ಪಾದನೆಯನ್ನು ಎದುರಿಸಬೇಕಾಯಿತು ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್  ಅವರ ‘ಪಾಕಿಸ್ತಾನವನ್ನು ಗೌರವಿಸಿ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್ಥಿಕ ಸಮಸ್ಯೆಗಳಿಂದಾಗಿ ಭಾರತದಿಂದ ದೂರವಿರುವ ನೆರೆರಾಷ್ಟ್ರ ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿಯಲ್ಲಿದೆ ಎಂದು ಶನಿವಾರ ವ್ಯಂಗ್ಯವಾಡಿದ್ದಾರೆ.

ಹಳೆಯ ವೈರಲ್ ವಿಡಿಯೊದಲ್ಲಿ, ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನ ಪರಮಾಣು ಬಾಂಬ್‌ಗಳನ್ನು ಹೊಂದಿರುವುದರಿಂದ ಪಾಕಿಸ್ತಾನಕ್ಕೆ ಭಾರತ ಗೌರವ ನೀಡಬೇಕು. ಪಾಕಿಸ್ತಾನದಲ್ಲಿ ಹುಚ್ಚನೊಬ್ಬ ಅಧಿಕಾರಕ್ಕೆ ಬಂದರೆ ಬಾಂಬ್ ಬಳಸಿ ಭಾರತಕ್ಕೆ ಹಾನಿ ಮಾಡಬಹುದೆಂದು ಹೇಳಿದ್ದರು.

ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು, ಬಿಜೆಪಿಯು ಪ್ರಧಾನಿ ಮೋದಿಯವರ “ಎಡವಟ್ಟು”ಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.