ಮನೆ ರಾಷ್ಟ್ರೀಯ ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯಾಘಾತದಿಂದ ಕಾಂಗ್ರೆಸ್‌ ಸಂಸದ ಸಂತೋಖ್‌ ಚೌಧರಿ ನಿಧನ

ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯಾಘಾತದಿಂದ ಕಾಂಗ್ರೆಸ್‌ ಸಂಸದ ಸಂತೋಖ್‌ ಚೌಧರಿ ನಿಧನ

0

ಚಂಡೀಗಢ: ಭಾರತ್‌ ಜೋಡೋ ಯಾತ್ರೆಯಲ್ಲಿ ಸಂಸದರೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ಮುಂಜಾನೆ ಪಂಜಾಬ್‌ನ ಫಿಲ್ಲೌರ್‌ನಲ್ಲಿ ನಡೆದಿದೆ.

ಪಂಜಾಬ್‌ನ ಜಲಂಧರ್ ಕ್ಷೇತ್ರದ ಕಾಂಗ್ರೆಸ್‌ ಸಂಸದ ಸಂತೋಖ್‌ ಚೌಧರಿ ಮೃತ ಸಂಸದ.

ಪಕ್ಷದ ಹಿರಿಯ ನಾಯಕ ಪ್ರತಾಪ್‌ ಸಿಂಗ್ ಬಾಜ್ವಾ ಈ ಕುರಿತು ಮಾಹಿತಿ ನೀಡಿದ್ದು, ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್‌ ಜೋಡೊ ಯಾತ್ರೆಯು ಪಂಜಾಬ್‌ನ ಫಿಲ್ಲೌರ್‌ನಲ್ಲಿ ಸಾಗುತ್ತಿತ್ತು. ಇದರಲ್ಲಿ ಚೌಧರಿ ಅವರೂ ಭಾಗವಹಿಸಿದ್ದರು. ಈ ವೇಳೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಚೌಧರಿ ಅವರನ್ನು ಫಗ್ವಾರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಬಾಜ್ವಾ ತಿಳಿಸಿದ್ದಾರೆ.

ಹೃದಯಾಘಾತಾದಿಂದ ಸಂಸದ ಸಂತೋಖ್ ಸಿಂಗ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ್ ಜೋಡೋ ಯಾತ್ರೆ ಶನಿವಾರ ಬೆಳಗ್ಗೆ ಪಂಜಾಬ್‌ನ ಲಾಧೋವಲ್‌ನಿಂದ ಆರಂಭಗೊಂಡಿತ್ತು.

ಹಿಂದಿನ ಲೇಖನದ್ವೇಷ ಭಾಷಣ- ಟಿವಿ ವಾಹಿನಿಗಳು ನಿರ್ದಿಷ್ಟ ಕಾರ್ಯಸೂಚಿ ಹೊಂದಿದ್ದು ಸಮಾಜದಲ್ಲಿ ಒಡಕು ಸೃಷ್ಟಿಸುತ್ತಿವೆ: ಸುಪ್ರೀಂ
ಮುಂದಿನ ಲೇಖನಜ.19 ರಂದು  ಕಲಬುರಗಿಗೆ ಪ್ರಧಾನಿ  ಮೋದಿ ಭೇಟಿ