ಮನೆ ರಾಷ್ಟ್ರೀಯ ಜ.19 ರಂದು  ಕಲಬುರಗಿಗೆ ಪ್ರಧಾನಿ  ಮೋದಿ ಭೇಟಿ

ಜ.19 ರಂದು  ಕಲಬುರಗಿಗೆ ಪ್ರಧಾನಿ  ಮೋದಿ ಭೇಟಿ

0

ಕಲಬುರಗಿ: ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಭೇಟಿ ನೀಡಲಿದ್ದಾರೆ. ಈ ತಿಂಗಳಲ್ಲಿ ಮೋದಿಯವರ ಎರಡನೇ ರಾಜ್ಯ ಭೇಟಿ ಇದಾಗಿರಲಿದೆ.

ಮಾಲ್ಖೇಡ್‌’ನಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿಯವರು ತಾತ್ಕಾಲಿಕವಾಗಿ ನಿರ್ಮಿಸಿರುವ ಮನೆಗಳ ಆಸ್ತಿ ಪತ್ರಗಳನ್ನು 51,900 ತಾಂಡಾ ನಿವಾಸಿಗಳಿಗೆ ವಿತರಿಸಲಿದ್ದಾರೆ.

ಹೈದರಾಬಾದ್-ಕರ್ನಾಟಕ ಪ್ರದೇಶದ ರಾಯಚೂರು, ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಿಂದ ತಾಂಡಾ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು. ಕಾರ್ಯಕ್ರಮಕ್ಕಾಗಿ ಬೃಹತ್ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ.

ಅಡುಗೆ ಮಾಡಲು 600 ಬಾಣಸಿಗರನ್ನು ನಿಯೋಜಿಸಲಾಗುವುದು. 200 ಊಟದ ಕೌಂಟರ್‌’ಗಳನ್ನು ತೆರೆಯಲಾಗುತ್ತದೆ. ತಾಂಡಾ ಫಲಾನುಭವಿಗಳನ್ನು ಕರೆತರಲು 2,582 ಬಸ್‌’ಗಳನ್ನು ನಿಯೋಜಿಸಲಾಗಿದೆ.

ಕಲಬುರಗಿಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿದೆ. ಈ ಹಿನ್ನಲೆ ರಾಜ್ಯ ಸರ್ಕಾರ ಪ್ರಭಾವಿ ಕಾರ್ಯಕ್ರಮ ರೂಪಿಸಲು ಮುಂದಾಗಿದೆ.

ಹಿಂದಿನ ಲೇಖನಭಾರತ್ ಜೋಡೋ ಯಾತ್ರೆಯಲ್ಲಿ ಹೃದಯಾಘಾತದಿಂದ ಕಾಂಗ್ರೆಸ್‌ ಸಂಸದ ಸಂತೋಖ್‌ ಚೌಧರಿ ನಿಧನ
ಮುಂದಿನ ಲೇಖನಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ: ಸಚಿವ ಸಿಸಿ ಪಾಟೀಲ್ ಖಂಡನೆ