ಮನೆ ರಾಜ್ಯ ಮಳೆಯ ಅಬ್ಬರ ತೀವ್ರಗೊಂಡಿದ್ದರೂ, ಕೇಂದ್ರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿರುವುದೇಕೆ ?: ಸರ್ಕಾರಕ್ಕೆ ಕಾಂಗ್ರೆಸ್ ತರಾಟೆ

ಮಳೆಯ ಅಬ್ಬರ ತೀವ್ರಗೊಂಡಿದ್ದರೂ, ಕೇಂದ್ರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿರುವುದೇಕೆ ?: ಸರ್ಕಾರಕ್ಕೆ ಕಾಂಗ್ರೆಸ್ ತರಾಟೆ

0

ಬೆಂಗಳೂರು(Bengaluru): ರಾಜ್ಯದಲ್ಲಿ ಮಳೆಯ ಅಬ್ಬರದಿಂದ ಪ್ರವಾಹ ಸ್ಥಿತಿ ಉಂಟಾಗಿದ್ದರೂ, ೪೦ ಪರ್ಸೆಂಟ್ ಸರ್ಕಾರ ಕೇಂದ್ರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿರುವುದೇಕೆ ? ಎಂದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತಾಗಿ ಸರಣಿ ಮಾಡಿರುವ ಕಾಂಗ್ರೆಸ್, ಮಳೆಯಿಂದಾದ ಅವಾಂತರಕ್ಕೆ ಸರ್ಕಾರ ಕೈಗೊಂಡ ರಕ್ಷಣಾ ಕ್ರಮಗಳೇನು? ಆಶ್ರಯ ಕೇಂದ್ರಗಳನ್ನು ತೆರೆಯದಿರುವುದೇಕೆ? ಮನೆ ಹಾನಿಗೆ ಕೇವಲ ೧೦,೦೦೦ ಪರಿಹಾರ ಸಾಕೇ? ಪ್ರಾಣ ಕಳೆದುಕೊಂಡ ಜನ, ಜಾನುವಾರಿಗೆ ನೀಡಿದ ಪರಿಹಾರವೇನು? ಎಂದು ಪ್ರಶ್ನೆ ಮಾಡಿದೆ.


ಅಷ್ಟೇ ಅಲ್ಲ, ೨೦೧೯ರ ಪ್ರವಾಹ ಸಂದರ್ಭದಲ್ಲಿ ಸಂಪುಟವೆ ಇರಲಿಲ್ಲ. ೨೦೨೦ರ ಪ್ರವಾಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ತಿಕ್ಕಾಟ ನಡೆಯುತ್ತಿತ್ತು. ೨೦೨೧ರಲ್ಲಿ -ಸಮರ್ಪಕ ನೆರೆ ಪರಿಹಾರ ನೀಡಲಿಲ್ಲ. ಈಗ ಮತ್ತೊಮ್ಮೆ ರಾಜ್ಯದಲ್ಲಿ ಮಳೆ ಹಾನಿ, ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ನಾಪತ್ತೆಯಾಗಿದ್ದಾರೆ. ಸಿಎಂ ಆನಲೈನ್ ಮೀಟಿಂಗ್ ಗಳಿಗೆ ಸೀಮಿತರಾಗಿದ್ದಾರೆ. ಜನರನ್ನು ಕೇಳುವವರಾರು? ಎಂದು ಕಿಡಿಕಾರಿದೆ.
ರಾಜ್ಯಾಧ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದ್ದು, ನದಿಗಳಲ್ಲಿ ಹರಿವು ಹೆಚ್ಚಳವಾಗಿದ್ದು, ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.
ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಭೂಕುಸಿತದ ಘಟನೆಗಳೂ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ಸಂಪರ್ಕಗಳು ಕಡಿದು ಹೋಗಿವೆ.