ಮನೆ ರಾಜಕೀಯ ದೆಹಲಿ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲು: ಜನ ಮೋದಿ ನಾಯಕತ್ವ ನಂಬಿದ್ದಾರೆ- ಜಗದೀಶ್ ಶೆಟ್ಟರ್

ದೆಹಲಿ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲು: ಜನ ಮೋದಿ ನಾಯಕತ್ವ ನಂಬಿದ್ದಾರೆ- ಜಗದೀಶ್ ಶೆಟ್ಟರ್

0

ಹುಬ್ಬಳ್ಳಿ:  ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರ ಹಿಡಿಯುವತ್ತ ದಾಪುಗಾಲಿಡುತ್ತಿದೆ. ಬಿಜೆಪಿ ಗೆಲುವಿನ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

Join Our Whatsapp Group

ಈ ಕುರಿತು ಮಾತನಾಡಿರುವ ಸಂಸದ ಜಗದೀಶ್ ಶೆಟ್ಟರ್,  ಇಡೀ ರಾಷ್ಟದಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇದೆ. ತೆಲಂಗಾಣ ಕರ್ನಾಟಕ ಸರ್ಕಾರ ಪತನ ಆಗಬಹುದು ರಾಹುಲ್ ಗಾಂಧಿ  ಇರುವರೆಗೂ ಕಾಂಗ್ರೆಸ್  ಉದ‍್ಧಾರ ಆಗಲ್ಲ ಎಂದು ನುಡಿದರು.

ಈ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಕೇಲವ ಒಂದು ಕುಟುಂಬದ ಪಕ್ಷ ದೆಹಲಿಯ ಜನರು ಪ್ರಧಾನಿ ಮೋದಿ ನಾಯಕತ್ವ ನಂಬಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.