ಮನೆ ಸಾಹಿತ್ಯ ಕೋಪವನ್ನು ಗೆಲ್ಲಿರಿ

ಕೋಪವನ್ನು ಗೆಲ್ಲಿರಿ

0

ಬಿರುಗಾಳಿಯಂತಹ ವೇಗದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನು ವಿಪರೀತ ಕೋಪದ ಸ್ವಭಾವವನ್ನು ಬೆಳೆಸಿಕೊಂಡಿದ್ದರು. ಕೋಪ ಆತನಿಗೆ ಇತರರ ಮೇಲೆ ಶಕ್ತಿ ನೀಡುತ್ತಿತ್ತು. ಒಂದು ದಿನ, ಅವನು ಓರ್ವ ಅಪರಿಚಿತ ವ್ಯಕ್ತಿಯನ್ನು ಸಂಧಿಸಿ ಆತನ ಮೇಲೆ ಕಿಡಿಕಾರಿಗಳು.

Join Our Whatsapp Group

ಆದರೆ, ಆಶ್ಚಾರ್ಯವೆಂದರೆ ಅಪರಿಚಿತನ ಕಣ್ಣುಗಳು ಆ ಕೋಪವನ್ನು ಮೆಟ್ಟಿ ಆ ವ್ಯಕ್ತಿಯತ್ತಲೇ ದಿಟ್ಟಿಸಿದವು . ಮುಂಗೋಪಿ ಮನುಷ್ಯನಿಗೆ ಆತ ಹೀಗೆ ಶಾಂತವಾಗಿ ಹೇಳಿದನು.

ಪ್ರಶ್ನೆಗಳು : 1. ಅಪರಿಚಿತ ವ್ಯಕ್ತಿ ಆತನಿಗೆ ಏನು ಹೇಳಿದನು ? 2. ಈಕಥೆಯ ಪರಿಣಾಮವೇನು ?

ಉತ್ತರಗಳು : 1. ಅಪರಿಚಿತ ಆತನಿಗೆ ಹೇಳಿದನು, ”ಭಯಪಡಬೇಕಾದ ಅಗತ್ಯವೇನೂ ಇಲ್ಲ. ಜಗತ್ತು ನಿನ್ನ ಈ ಕೋಪದ ಮುಖವಾಡ ಹಿಂದೆ ಅಡಗಿರುವ  ನಿನ್ನ ನಿಜವಾದ ವ್ಯಕ್ತಿತ್ವವನ್ನು ಕಾಣಲು ಬಿಡು.” ಆ ಅಸಹಿಷ್ಣು ವ್ಯಕ್ತಿ ಆ ಬಗ್ಗೆ ಆಲೋಚಿಸಲಾರಂಭಿಸಿದನು.

2. ಮುಂಗೋಪಿ ವ್ಯಕ್ತಿಯನ್ನು ಬದಲಾಯಿಸಿದಸ ಅಪರಿಚಿತನಲ್ಲಿದ್ದ ಅಂತಹ ವಿಶೇಷತೆಯಾದರೂ ಏನು? ಅಪರಿಚಿತರು ಆ ವ್ಯಕ್ತಿಯ ಮುಖವಾಡದ ಹಿಂದಿದ್ದ ನಿಜವಾದ ವ್ಯಕ್ತಿಯನ್ನು ನೋಡಿ ಅತನಿಗೆ ಕೋಪದ ಜೊತೆಗೇ ಅವನೆಲ್ಲಾ ಭಯಗಳೂ ತೊಲಗಲು ಬಿಡುವಂತೆ ಸೂಚಿಸಿದನು. ಮಕ್ಕಳು ಕೋಪಗೊಂಡು ದೊಡ್ಡವರನ್ನು ಹೊಡೆಯುತ್ತಾರೆ. ಅದರೆ ಮಕ್ಕಲ ಸಿಟ್ಟಿಗೆ ಯಾರೂ ಹೆದರುವುದಿಲ್ಲ.

ಇದರ ಸರಲ ಕಾರಣವೆಂದರೆ ಮಗು ಅಸಹಾಯಕವಾಗಿದ್ದು ದೈಹಿಕವಾಗಿ ಆ ಮಗುವಿಗಿಂತ  ನಾವು ಹೆಚ್ಚು ಸಶಕ್ತರಾಗಿರುತ್ತೇವೆ.  ಹಾಗೆತೇ ಹೆಚ್ಚು ಸಾತ್ವಿಕ ಶಕ್ತಿಯುಳ್ಳ ವ್ಯಕ್ತಿ ಯಾವುದಕ್ಕೂ ಹೆದರುವುದಿಲ್ಲ, ಏಕೆಂದರೆ ಅವನ ನಿರೀಕ್ಷೆಗಳು ಅತ್ಯಲ್ಪವಾಗಿದ್ದು ಆತ ಎಂದೂ ಯಾವುದರಿಂದಲೂ ನಿರಾಶನಾಗುವುದಿಲ್ಲ.