ಮನೆ ಅಪರಾಧ ಪ್ರಧಾನಿ ಮೋದಿ ಹತ್ಯೆಗೆ ಸಂಚು; ಎನ್‌ಐಎಗೆ ಇ-ಮೇಲ್ ಬೆದರಿಕೆ

ಪ್ರಧಾನಿ ಮೋದಿ ಹತ್ಯೆಗೆ ಸಂಚು; ಎನ್‌ಐಎಗೆ ಇ-ಮೇಲ್ ಬೆದರಿಕೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿರುವುದು ಬಯಲಾಗಿದ್ದು, ಗುಪ್ತ ಚರ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಬೆದರಿಕೆ ಇ-ಮೇಲ್‌ಗಳು ಬಂದಿವೆ.

ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿದ್ದಾರೆ. ಒಟ್ಟು 20 ಕೆ.ಜಿ ಆರ್.ಡಿ.ಎಕ್ಸ್ ಹಾಗೂ 20 ಸ್ಲೀಪರ್ ಸೆಲ್‌ಗಳನ್ನು ಹೊಂದಿದ್ದಾರೆ. 

ಇ-ಮೇಲ್ ಪ್ರಕಾರ ದಾಳಿಯ ಯೋಜನೆ ಸಿದ್ಧಪಡಿಸಲಾಗಿದೆ. ಮೇಲ್ ಬರೆದಿರುವ ವ್ಯಕ್ತಿಗೆ ಹಲವು ಭಯೋತ್ಪಾದಕರೊಂದಿಗೆ ಸಂಪರ್ಕವಿದೆ ಎಂದು ಮೇಲ್ ನಲ್ಲಿ ಹೇಳಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳಿಗೂ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದೆ. ಮೇಲ್ ಬಂದಿರುವ ಮೇಲ್ ಐಡಿ ತನಿಖೆ ನಡೆಯುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂಬೈ ಶಾಖೆಗೆ ಇಮೇಲ್ ಬಂದಿದೆ.

ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದು ಬಹಿರಂಗವಾದ ನಂತರ ಭದ್ರತಾ ಪಡೆಗಳು ಎಚ್ಚೆತ್ತುಕೊಂಡಿದ್ದು, ಇಮೇಲ್ ಕಳುಹಿಸಿದವರನ್ನು ಪತ್ತೆ ಮಾಡಲಾಗುತ್ತಿದೆ.

ಹಿಂದಿನ ಲೇಖನವಿದೇಶ ಪ್ರಯಾಣ: ರಾಣಾ ಅಯ್ಯೂಬ್‌ಗೆ ಸದ್ಯಕ್ಕೆ ದೊರೆಯದ ಅನುಮತಿ
ಮುಂದಿನ ಲೇಖನಪರೀಕ್ಷಾ ಪೇ ಚರ್ಚಾ ವೀಕ್ಷಣೆಗೆ ಮೈಸೂರು ವಿವಿಯಲ್ಲಿ ಎಲ್‌ ಇಡಿ ಸ್ಕ್ರೀನ್ ವ್ಯವಸ್ಥೆ