ಮನೆ ಕಾನೂನು ಗ್ರಾಹಕನಿಗೆ ಕಿರುಕುಳ: ಏರ್‌ ಟೆಲ್‌ ಗೆ ವಿಧಿಸಿದ್ದ ₹5 ಲಕ್ಷ ದಂಡ ಆದೇಶ ಎತ್ತಿಹಿಡಿದ ದೆಹಲಿ...

ಗ್ರಾಹಕನಿಗೆ ಕಿರುಕುಳ: ಏರ್‌ ಟೆಲ್‌ ಗೆ ವಿಧಿಸಿದ್ದ ₹5 ಲಕ್ಷ ದಂಡ ಆದೇಶ ಎತ್ತಿಹಿಡಿದ ದೆಹಲಿ ಗ್ರಾಹಕರ ನ್ಯಾಯಾಲಯ

0

ಬಾಕಿ ಹಣ ಪಾವತಿಸಿಲ್ಲ ಎಂದು ಗ್ರಾಹಕರೊಬ್ಬರಿಗೆ ಪದೇಪದೇ ಕರೆ ಮಾಡಿ ಕಿರುಕಿಳ ನೀಡಿದ್ದಲ್ಲದೇ ಇಂಟರ್‌ನೆಟ್‌ ಸೌಲಭ್ಯ ಸ್ಥಗಿತಗೊಳಿಸಿದ್ದರ ಸಂಬಂಧ ಏರ್‌ಟೆಲ್‌ ಸಂಸ್ಥೆಗೆ ₹5 ಲಕ್ಷ ದಂಡ ವಿಧಿಸಿರುವುದನ್ನು ದೆಹಲಿ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಪರಿಹಾರ ಆಯೋಗ ಈಚೆಗೆ ಎತ್ತಿ ಹಿಡಿದಿದೆ.

Join Our Whatsapp Group

ಏರ್‌ಟೆಲ್‌ ಸೇವೆ ನೀಡುವುದರಲ್ಲಿ ಉದಾಸೀನತೆ ತೋರುವುದಲ್ಲದೇ ಗ್ರಾಹಕರಿಗೆ ಕಿರುಕುಳ ನೀಡಿದೆ ಎಂದು ಆಯೋಗ ಅಧ್ಯಕ್ಷ ಡಾ. ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್‌ ಮತ್ತು ನ್ಯಾಯಾಂಗ ಸದಸ್ಯ ಪಿಂಕಿ ಅವರ ವಿಭಾಗೀಯ ಪೀಠ ಹೇಳಿದೆ. ಅಲ್ಲದೇ, ಜಿಲ್ಲಾ ಗ್ರಾಹಕರ ಒಕ್ಕೂಟವು ಏರ್‌ಟೆಲ್‌ಗೆ 2014ರ ಸೆಪ್ಟೆಂಬರ್‌ 4ರಂದು ದಂಡ ವಿಧಿಸಿರುವುದನ್ನು ಎತ್ತಿ ಹಿಡಿದಿದೆ.

2013ರಲ್ಲಿ ಗ್ರಾಹಕರೊಬ್ಬರು ಏರ್‌ಟೆಲ್‌ನಿಂದ ಸ್ಥಿರ ದೂರವಾಣಿ ಮತ್ತು ಇಂಟರ್‌ನೆಟ್‌ ಸೇವೆ ಪಡೆದಿದ್ದರು. ಈ ಸಂಬಂಧ ಬಾಕಿ ಪಾವತಿಗಾಗಿ ಗ್ರಾಹಕರು ₹4,995 ಮೊತ್ತದ ಚೆಕ್‌ ಅನ್ನು ನೀಡಿದ್ದರು. ಖಾತೆಯಲ್ಲಿ ಹಣ ಇಲ್ಲದೇ ಇದ್ದುದರಿಂದ ಚೆಕ್‌ ಬೌನ್ಸ್‌ ಆಗಿದೆ ಎಂದು ಏರ್‌ಟೆಲ್‌ ಹೇಳಿದ್ದು, ಪದೇಪದೇ ಆ ಗ್ರಾಹಕರಿಗೆ ಏರ್‌ಟೆಲ್‌ ಕಡೆಯಿಂದ ಕರೆ ಮಾಡಲಾಗಿತ್ತು. ಆಗ ಗ್ರಾಹಕರು, ಬ್ಯಾಂಕ್‌ನಲ್ಲಿ ಮತ್ತೊಮ್ಮೆ ಪರಿಶೀಲಿಸುವಂತೆ ಸೂಚಿಸಿದ್ದು, ಅದನ್ನು ಪರಿಶೀಲಿಸಲಾಗಿ ಏರ್‌ಟೆಲ್‌ಗೆ ಗ್ರಾಹಕರ ಖಾತೆಯಿಂದ ಹಣ ಸಂದಾಯವಾಗಿತ್ತು. ಅದಾಗ್ಯೂ, ಹಣ ಸಂದಾಯವಾಗಿರುವುದನ್ನು ಖಾತರಿಪಡಿಸದ ಏರ್‌ಟೆಲ್‌ ₹7,549 ಲೀಗಲ್‌ ನೋಟಿಸ್‌ ಕಳುಹಿಸುವುದಕ್ಕೂ ಮುನ್ನ 2013ರ ಮೇನಲ್ಲಿ ಇಂಟನೆಟ್‌ ಸೇವೆ ಸ್ಥಗಿತಗೊಳಿಸಿತ್ತು. ಇದಕ್ಕೆ ಬಾದಿತರಾಗಿದ್ದ ಆ ಗ್ರಾಹಕರು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಏರ್‌ಟೆಲ್‌ ವಿರುದ್ಧ ದಾವೆ ಹೂಡಿದ್ದರು.

2014ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಏರ್‌ಟೆಲ್‌ ದುರ್ವರ್ತನೆ ತೋರಿದೆ ಎಂದಿದ್ದು, ₹5 ಲಕ್ಷ ಪರಿಹಾರ ಪಾವತಿಸಲು ಆದೇಶಿಸಿತ್ತು. ಈ ಪೈಕಿ ₹3 ಲಕ್ಷವನ್ನು ಗ್ರಾಹಕರಿಗೆ ಉಳಿದ ₹2 ಲಕ್ಷವನ್ನು ರಾಜ್ಯ ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸಲು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿದ್ದ ಏರ್‌ಟೆಲ್‌ ಅರ್ಜಿಯನ್ನು ಜುಲೈ 1ರಂದು ರಾಜ್ಯ ಗ್ರಾಹಕರ ಆಯೋಗ ವಜಾ ಮಾಡಿದೆ.

ಹಿಂದಿನ ಲೇಖನತಮ್ಮ ಇಚ್ಛೆಯ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಯುವತಿಯನ್ನು ಕೊಂದು ಸುಟ್ಟು ಹಾಕಿದ ಕುಟುಂಬಸ್ಥರು
ಮುಂದಿನ ಲೇಖನಒಂದು ತಿಂಗಳೊಳಗೆ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ. ಅನುದಾನದ ಭರವಸೆ ನೀಡಿದ ಗಡ್ಕರಿ