ಮನೆ ಸುದ್ದಿ ಜಾಲ ಶ್ರೀನಗರ ಗ್ರೇನೆಡ್ ದಾಳಿ: ಮತ್ತೋರ್ವ ಯುವತಿ ಸಾವು

ಶ್ರೀನಗರ ಗ್ರೇನೆಡ್ ದಾಳಿ: ಮತ್ತೋರ್ವ ಯುವತಿ ಸಾವು

0

ಶ್ರೀನಗರ: ಲಾಲ್‌ಚೌಕ್‌ ಸಮೀಪದ ಹರಿಸಿಂಗ್‌ ಹೈ ಸ್ಟ್ರೀಟ್‌ನಲ್ಲಿ ಭಾನುವಾರ ಸಂಜೆ ಉಗ್ರರು ನಡೆಸಿದ ಗ್ರೆನೆಡ್‌ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಯುವತಿಯೊಬ್ಬರು ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ರಫಿಯಾ( 20) ಮೃತಪಟ್ಟವರು. ‘ಗ್ರೆನೆಡ್‌ ದಾಳಿಯಲ್ಲಿ ಗಾಯಗೊಂಡು ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ರಫಿಯಾ ಸೋಮವಾರ ಮುಂಜಾನೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ ಎಂದು ಶ್ರೀನಗರದ ಎಸ್‌ಎಂಎಚ್‌ಎಸ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕವಲ್‌ಜಿತ್‌ ಸಿಂಗ್‌ ತಿಳಿಸಿದರು.

ವಾರಾಂತ್ಯದ ಮಾರುಕಟ್ಟೆಯಿಂದಾಗಿ ಜನ ಜಂಗುಳಿಯಿಂದ ಕೂಡಿದ್ದ ಹರಿಸಿಂಗ್‌ ಸ್ಟ್ರೀಟ್‌ನಲ್ಲಿ ಭಾನುವಾರ ಸಂಜೆ ನಡೆದ ಗ್ರೆನೆಡ್‌ ದಾಳಿಯಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 34 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಶ್ರೀನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದಿನ ಲೇಖನಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್
ಮುಂದಿನ ಲೇಖನಧನದಾಹಿಗಳಾಗಿರುವ ಪೊಲೀಸರು: ಇಷ್ಟು ಒಳ್ಳೆಯ ಆಡಳಿತ ಇನ್ಯಾರು ಕೊಡ್ತಾರೆ ?- ಡಿಕೆಶಿ ವ್ಯಂಗ್ಯ