ಮಡಿಕೇರಿ(Madikeri): ಜಿಲ್ಲೆಯಾದ್ಯಂತ ಸೋಮವಾರವೂ ಮಳೆ ಮುಂದುವರೆದಿದ್ದು, ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ೧೭,೨೩೧ ಕ್ಯುಸೆಕ್ ನೀರು ಬರುತ್ತಿದ್ದು, ೨೧,೧೬೬ ಕ್ಯುಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.
ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೪ ಸೆಂ.ಮೀ, ಚೆಂಬು ಗ್ರಾಮದಲ್ಲಿ ೧೨ ಸೆಂ.ಮೀ ನಷ್ಟು ಮಳೆ ಸುರಿದಿದೆ. ಎನ್ಡಿಆರ್ಎಫ್ ತಂಡವು ಪಯಸ್ವಿನಿ ನದಿಯ ಕಿಂಡಿ ಅಣೆಕಟ್ಟೆಗೆ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿವೆ.
ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂಗನವಾಡಿ, ೧ನೇ ತರಗತಿಯಿಂದ ೧೦ ನೇ ತರಗತಿವರೆಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಕಳೆದ ೫ ದಿನಗಳಿಂದ ಬಂದ್ ಆಗಿದ್ದ ಕಾಲೇಜುಗಳು ಇಂದು ಆರಂಭವಾಗಲಿವೆ.