ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಹೋರಾಟ ಮುಂದುವರೆದಿದ್ದು, ವಿವಿಧ ಸಂಘಟನೆಗಳ ಕಾರ್ಯಕರ್ತರು ಧರಣಿ.ರಸ್ತೆ ತಡೆ ನಡೆಸಿದರು.
ನಗರದ ಸರ್ ಎಂವಿ ಪ್ರತಿಮೆ ಬಳಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಜೊತೆಗೂಡಿದ ಇಂಡುವಾಳು ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಸದ್ಯಸರು,ಕನ್ನಡ ಸೇನೆ ಹಾಗೂ ರೈತ ಸಂಘದ ಕಾರ್ಯಕರ್ತರು ನಿರಂತರ ಧರಣಿಯಲ್ಲಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಬೆಂಗಳೂರು -ಮೈಸೂರು ಹೆದ್ದಾರಿಗೆ ಇಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಕೊಳ್ಳದ ಜಲಾಶಯಗಳಿಂದ ಕಳೆದ ಎರಡು ತಿಂಗಳಿಂದ ನಿರಂತರ ನೀರು ಹರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ನಾಡಿನ ರೈತರ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದೆ.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ, ಕೇಂದ್ರ ಸರ್ಕಾರ ಕರುನಾಡಿನ ಬಗ್ಗೆ ಮಲತಾಯಿ ಧೋರಣೆ ಅನುಸರಿ
ಸುತ್ತಿದೆ,ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ತಾರತಮ್ಯ ನೀತಿ ಅನುಸರಿಸಿ ತಮಿಳುನಾಡಿನ ಹಿತ ಕಾಪಾಡಲು ಮುಂದಾಗಿವೆ ಎಂದು ಕಿಡಿಕಾರಿದರು.
ಇಂಡುವಾಳು ಮಹಿಳಾ ಸ್ವ ಸಹಾಯ ಸಂಘದ ಸುಧಾ ಚಂದ್ರಶೇಖರ್,ಶೃತಿ ಸಿದ್ದಪ್ಪ,ಶೀಲಾ,ಮಂಜುಳಾ ಬಸವರಾಜ್, ಶೈಲಜಾ,ವಸಂತ ಕುಮಾರಿ,ಭಾಗ್ಯಮ್ಮ, ದೇವಮ್ಮ,
ಜಯಮ್ಮ ನೇತೃತ್ವ ವಹಿಸಿದ್ದರು.
ಜಲಾಶಯಗಳು ಬರಿದಾಗಿ ರೈತರು ಬೆಳೆ ಬೆಳೆಯುವ ಪರಿಸ್ಥಿತಿ ಇಲ್ಲದಿರುವುದರಿಂದ ಮಂಡ್ಯ ಜಿಲ್ಲೆ ರೈತರ ಕಾಪಾಡಲು ಒಂದು ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು,ಮೇಕೆದಾಟು ಯೋಜನೆಯನ್ನು ತುರ್ತು ಆರಂಭ ಮಾಡಬೇಕು ಎಂದು ಕನ್ನಡ ಸೇನೆ ಕಾರ್ಯಕರ್ತರುಒತ್ತಾಯಿಸಿದರು.
ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಸಿ. ಮಂಜುನಾಥ್,ಎಂ.ಎಸ್. ಮಂಜುನಾಥ್,ಮಹಾಂತಪ್ಪ,ರವಿ. ಶಿವರಾಮು ನೇತೃತ್ವ ವಹಿಸಿದ್ದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ,ಕೆ.ಬೋರಯ್ಯ, ರೈತ ಸಂಘದ ಇಂಡು ವಾಳು ಚಂದ್ರಶೇಖರ್,ಕೀಳಘಟ್ಟ ಪುಟ್ಟಸ್ವಾಮಿ,ಬೋರ್ ವೆಲ್ ನಾರಾಯಣ್, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ,ದಸಂಸ ಎಂ.ವಿ.ಕೃಷ್ಣ ನೇತೃತ್ವ ವಹಿಸಿದ್ದರು.