ವಿಷ್ಣುವಿನ ಆಜ್ಞೆಯಂತೆ ಕೂಡಲೇ ದೇವೇಂದ್ರನು ರಾಕ್ಷಸರನ್ನು ಭೇಟಿ ಮಾಡಿ ಅಮೃತ ಕಳಸವನ್ನು ಸಂಪಾದಿಸುವ ಬಗ್ಗೆ ಪ್ರಸ್ತಾಪನೆ ಮಾಡಿ ಅವರನ್ನು ಒಪ್ಪಿಸಿದನು. ದಿತಿ, ಅಧಿತಿಯ ಪುತ್ರರು ಸಂಧಿ ಮಾಡಿಕೊಂಡು, ಮಂದರ ಗಿರಿಯನ್ನು ಬುಡ ಸಮೇತವಾಗಿ ಕಿತ್ತು ತಂದರು. ಆ ಪರ್ವತದ ಮೇಲೆ ಅಡಗಿರುವ ಔಷಧೀಲತೆಗಳನ್ನು ಸಮುದ್ರ ಗರ್ಭದೊಳಕ್ಕೆ ನಿಕ್ಷೇಪಿಸಿ, ಮಂದರಗಿರಿಯನ್ನು ಸಮುದ್ರದ ಮೇಲ್ಭಾಗದಲ್ಲಿಟ್ಟು ವಾಸುಕಿಯನ್ನು ಹಗ್ಗವನ್ನಾಗಿ ಅದಕ್ಕೆ ಸುತ್ತಿಕೊಂಡು ಮಧಿಸುವಾಗ ಅದಕ್ಕೆ ಆಧಾರವಿಲ್ಲದೆ ನೀರಿನಲ್ಲಿ ಮಂದರಾದ್ರಿಯು ಮುಳಗಿ ಹೋಯಿತು. ಆಗ ದೇವೇಂದ್ರನು ನಿಸ್ಸಹಾಯಕನಾಗಿ ಶ್ರೀನಾಥನನ್ನು ಸ್ಮರಿಸಿದನು.
ತಕ್ಷಣವೇ ಪುಂಡರಿಕಾಕ್ಷನು ಪ್ರತ್ಯಕ್ಷನಾಗಿ ಲೋಕೋಪಕಾರಕ್ಕಾಗಿ ಸಮುದ್ರ ಗರ್ಭದಲ್ಲಿ ಲಕ್ಷ ಯೋಜನೆಯ ವೈಶಾಲ್ಯವುಳ್ಳ ಕರ್ಮ ರೂಪವನ್ನು ಧರಿಸಿ ಅವತರಿಸಿದನು. ತನ್ನ ಬೆನ್ನಿನ ಮೇಲೆ ಮಂದರಾದ್ರಿಯ ಭಾರವನ್ನೆಲ್ಲ ಹೊತ್ತು ದೇವ ದಾನವರಿಗೆ ಸಹಕರಿಸಿದನು. ಆದಿಶೇಷನು ಕೋಲಿನ ಹಗ್ಗವಾಗಿದ್ದು, ಮಧಿಸುವಾಗ ಉಂಟಾಗುವ ನೋವನ್ನು ಸಹಿಸಲಿಕ್ಕಾಗಿ ವಿಷ್ಣು ಆತನಿಗೆ ಮಹಾಬಲವನ್ನು ಪ್ರಧಾನಿಸಿದನು. ರಾಕ್ಷಸರು ಆದಿಶೇಷನ ತಲೆಯ ಕಡೆಗೆ ದೇವತೆಗಳು ಬಾಲದ ಕಡೆಗೆ ನಿಂತರು.
ಅದನ್ನು, ಮಧಿಸುವಾಗ ಹಾವಿನ ಬಾಯಿಂದ ಹೊರಬರುತ್ತಿದ್ದಂತಹ ವಿಷಾಗ್ನಿ ಜ್ವಾಲೆಗಳ ತಾಪಕ್ಕೆ ಧನುಜರೆಲ್ಲರೂ ಹಾಹಾಕಾರವನ್ನು ಮಾಡುತ್ತಿದ್ದರೆ, ಬಾಲದ ಕಡೆಗೆ ನಿಂತಿದ್ದ ದೇವತೆಗಳು ಆರಾಮಾಗಿದರು. ಕ್ರಮೇಣ ರಾಕ್ಷಸರು ಬಲವನ್ನು ಕಳೆದುಕೊಳ್ಳುತ್ತಾ ನಿರ್ವೀಯರಾಗಿ ಪ್ರಜ್ಞೆ ಕಳೆದುಕೊಂಡರು. ವಿಷ ಜ್ವಾಲದ ತಾಪದಿಂದ ಪಕ್ಕಕ್ಕೆ ಸರಿದ ಮೇಘಗಳು ದೇವತೆಗಳ ಮೇಲೆ ಮಳೆಯನ್ನು ಸುರಿಸಿ ಅವರನ್ನು ಸಂತೋಷದಲ್ಲಿ ಮುಳುಗಿಸಿದನು. ಈ ರೀತಿಯಾಗಿ ಕ್ಷೀರ ಸಮುದ್ರದ ಮಂಥವು ನಡೆಯುತ್ತಿದ್ದಾಗ, ದುರ್ವಾಸನ ಶಾಪದಿಂದ ಅದೃಶ್ಯವಾದಂತಹ ದೇವತಾ ಸಂಪತ್ತುಗಳು ಮತ್ತು ಉದ್ಭವಿಸಿದವು. ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಸೌಂದರ್ಯ, ಲಾವಣ್ಯಾವತಿಯರಾದ ಅಪ್ಸರೆಯರು, ಐರಾವತ, ಉಚ್ಛೈಶ್ರವ ಇವೆಲ್ಲವೂ ಉಪೇಂದ್ರನನ್ನು ಇಂದ್ರನಿಗೆ ಬಹುಕರಿಸಿದನು. ಕುಬೇರನಿಗೆ ನವ ವಿಧವಾದಂತಹ ನಿಧಿ ನಿಕ್ಷೇಪಗಳು ಕೊಟ್ಟನು. ಚಂದ್ರನನ್ನು ಸತಿಪತಿಗೆ ಶಿರೋ ಭೂಷಣವನ್ನಾಗಿ ಕೊಟ್ಟನು. ಅಮಿತವಾದ ರಾಜ್ಯಸದೊಂದಿಗೆ ಮದಿಸಿದ ರೂಪರೇಖಗಳೊಂದಿಗೆ ಮಧ್ಯಪಾನ ಪಾತ್ರೆಯನ್ನು ಕೈಯಲ್ಲಿಡಿದು ಮದಿರಾಪತಿಯು ಉದಯಿಸಲು ಅದನ್ನು ಶ್ರೀಹರಿಯು ರಾಕ್ಷಸರಿಗೆ ಕೊಟ್ಟನು. ದೇವತೆಗಳ ಗರ್ವವನ್ನು ಅಡಗಿಸಲಿಕ್ಕೆಂದು ಧಾರುಣವಾದ ವಿಷವು ಉದ್ಭವಿಸಿತು. ಅದನ್ನು ಸರ್ಪರಾಜನು ಸ್ವೀಕರಿಸಿದನು. ದಿವ್ಯವಾದ ವಸ್ತ್ರಗಳನ್ನು ಆಭರಣಗಳನ್ನು ಅಲಂಕರಿಸಿಕೊಂಡು ಒಂದು ಕೈಯಲ್ಲಿ ಕರಕ್ಕಾಯಿಯನ್ನು ಮತ್ತೊಂದು ಕೈಯಲ್ಲಿ ಅಮೃತ ಕಲಶವನ್ನು ಹಿಡಿದು, ಔಷಧ ಯೋಗದಲ್ಲಿ ನಿಷ್ಣಾತನಾದ ಧನ್ವಂತರಿಯು, ಕ್ಷೀರಸಾಗರದಿಂದ ಹೊರಗೆ ಬಂದನು. ಕ್ಷಿರಸಾಗರದಿಂದ ಲೋಕೋತ್ತರ ಸೌಂದರ್ಯ ರಾಶಿಯಾದ ಲಕ್ಷ್ಮಿ ದೇವಿಯು ಜನಿಸಿದರು. ಆಕೆಯ ಕರದಲ್ಲಿ ಕಮಲವು ಶೋಭಿಸುತ್ತಿತ್ತು. ಪದ್ಮಾಸನಾಸೀನಳಾಗಿ ತ್ರಿಲೋಕಗಳಿಗೂ ಆರಾಧ್ಯ ದೇವತೆಯಾದ ಆಕೆಯೂ ಸಮುದ್ರರಾಜನ ಮಗಳಾಗಿ ಭಕ್ತರಿಗೆ ಸನ್ನಿಧಿಯಾಗಿದ್ದಾಳೆ.
ಈ ರೀತಿಯಾಗಿ ಶ್ರೀದೇವಿಯು ಉದಯಿಸುತ್ತಲೇ ಆದಿ ಮಹರ್ಷಿಗಳೆಲ್ಲರೂ ವೇದಗಾನ ಪವಿತ್ರವಾದ ಕಂಠದಿಂದ ಶ್ರೀಸೂಕ್ತವನ್ನು ಪಠಿಸಿದರು. ತುಂಬುರ ವಿಶ್ವವಸು ಗಂಧರ್ವರು ಸಂಗೀತವನ್ನು ಕೇಳಿಸಿದರು. ಅಪ್ಸರೆಯರು ನೃತ್ಯವನ್ನು ಪ್ರದರ್ಶಿಸಿ ಕಣ್ಣಿಗೆ ಸಂತೋಷವನ್ನುಂಟು ಮಾಡಿದರು. ದಿಗ್ಗಜರು ಪುಣ್ಯ ನದಿ ಜಲದಿಂದ ಅಭಿಷೇಕ ಮಾಡಿದರು. ಸಮುದ್ರರಾಜನು ಕಮಲದ ಹೂಗಳನ್ನು ತಂದನು. ವಿಶ್ವಕರ್ಮನು ದಿವ್ಯ ಆಭರಣಗಳನ್ನು ಕೊಟ್ಟನು. ಮಹಾ ವೈಭವದೊಂದಿಗೆ ರಾರಾಜಿಸುತ್ತಿದ್ದ ಆ ದೇವಿಯನ್ನು ದೇವದೇವನಾದ ಶ್ರೀ ಹರಿಯು ಸ್ವೀಕರಿಸಿ ಪ್ರೀತಿಯಿಂದ ತನ್ನ ವಕ್ಷಸ್ಥಳದಲ್ಲಿ ಇಟ್ಟುಕೊಂಡನು. ರಾಕ್ಷಸರಿಗೆ ಯಾವ ಸಂಪತ್ತುಗಳು ಸಿಗದಂತೆ ದಾಮೋದರರನ್ನು ತನ್ನ ದಾಸರಿಗೆ ಎಲ್ಲವನ್ನು ಕೊಟ್ಟನೆಂದು ದಾನವರಲ್ಲಿ ಕೋಲಾಹಲ ಉಂಟಾಯಿತು. ವಿಪ್ರಚಿತ್ತಿ ಮುಂತಾದ ರಾಕ್ಷಸರು ದೇವತೆಗಳ ಬಳಿಗೆ ಬಂದು ಅವರಿಂದ ಅಮೃತ ಕಳಸವನ್ನು ಕಿತ್ತುಕೊಂಡರು. ಆಗ ಮಹಾವಿಷ್ಣು ನಿಶಾಶರರ ನಡುವೆ ಸ್ತ್ರೀ ವೇಷದಲ್ಲಿ ಪ್ರವೇಶಿಸಿ ತನ್ನ ಮೋಹನ ಸೌಂದರ್ಯ ರೂಪದಿಂದ ಅವರನ್ನು ಮತ್ತು ಬರುವಂತೆ ಮಾಡಿದನು. ಸೌಂದರ್ಯವನ್ನು ಚಿಮ್ಮುತ್ತಿರುವ ಮುಖ ಪದ್ಮವುಳ್ಳ ಅಪೂರ್ವ ಲಾವಣ್ಯವತಿಯಾದ ಆ ಜಗನ್ಮೋಹಿನಿಯನ್ನು ಕಂಡು ರಾಕ್ಷಸರು ಮೈಮರೆತರು. ಮೋಹ ಪರವಶವನ್ನಾಗಿಸುವ ಆಕೆ ಕಣ್ಣುಗಳು ಕಮಲದ ಹೂಗಳಂತೆ ಇದ್ದವು. ಸಣ್ಣನೆಯ ಸೋಂಟ ಅಪರೂಪದಂತಹ ದೇಹ ಸೌಂದರ್ಯ ಅಚ್ಚುಕಟ್ಟಾದ ಆಕೆ ಹೃದಯ ಭಾಗ ಅವರಿಗೆ ಬ್ರಾoತಿಯನ್ನು ಉಂಟು ಮಾಡಿದವು.
ಅವರೆಲ್ಲರೂ ಈ ರೀತಿ ಮೈ ಮರೆತಿದ್ದ ಸಮಯದಲ್ಲಿ ಪದ್ಮನಾಭನು ಅಮೃತ ಕಳಸವನ್ನು ದೇವತೆಗಳಿಗೆ ಅರ್ಪಿಸಿದನು. ದೇವತೆಗಳು ಅಮೃತವನ್ನು ಸ್ವೀಕರಿಸಿ ಅಮರರಾದರು. ಅವರ ಬಲಪರಾಕ್ರಮಗಳಿಗೆ ಹೆದರಿ ದಾನವರು ಪಾತಾಳ ಲೋಕಕ್ಕೆ ಓಡಿ ಹೋದರು. ದೇವತೆಗಳಿಗೆ ಲಕ್ಷ್ಮಿ ಕಟಾಕ್ಷದಿಂದ ಸಕಲ ಸಂಪತ್ತುಗಳು ಲಭಿಸಿತು. ಅದೇ ರೀತಿ ಲೋಕಗಳು ಸಹ ಮತ್ತೆ ಸಂಪತ್ತಿನಿಂದ ನೆಲೆಸಿದವು. ದೇವವಲ್ಲಭನು ಇಂದ್ರ ಪದವಿಯನ್ನು ಅಲಂಕರಿಸಿ ಪೂರ್ವ ವೈಭವವನ್ನು ಪಡೆದು ಧರ್ಮಾಚರಣೆಯ ಬುದ್ಧಿಯಿಂದ ಪರಿಪಾಲನೆಗೆ ಉಪಕ್ರಮಿಸಿದನು. ನಂತರ ಲಕ್ಷ್ಮೀನಾರಾಯಣ ರನ್ನು ಸುತ್ತಿಸಿ ಜಗತ್ತು ಚರಿತಾರ್ಥವಾಯಿತು. ಕ್ಷೀರಸಮುದ್ರದಲ್ಲಿ ಉದ್ಭವಿಸಿದ ಶ್ರೀದೇವಿಯು ಮೊದಲಿಗೆ ಭೃಗು ಮಹರ್ಷಿಗೆ ಖ್ಯಾತಿಯ ಗರ್ಭದಲ್ಲಿ ಜನಿಸಿ ಪುತ್ರಿಯಯಾದಳು. ಆಕೆಯನ್ನು ನಿಯಮಿತ್ತಮಾತ್ರವಾಗಿ ಶ್ರೀಹರಿಗೆ ಕೊಟ್ಟು ಕನ್ಯಾದಾನವನ್ನು ಮಾಡಿ ಕೃತಾರ್ಥನಾದನು.
ಪುಣ್ಯದಾಯಕವಾದ ಲಕ್ಷ್ಮಿ ಚರಿತೆಯನ್ನು ಕೇಳಿದ ನಂತರ ಮೈತ್ರೇಯನು “ಗುರುಗಳೇ ! ನೀವು ಈ ಕಥೆಯನ್ನು ಪ್ರಸ್ತಾಪಿಸಿದ ಭೃಗು ಮೊದಲಾದ ಋಷಿಗಳ ವಂಶ ಚರಿತ್ರೆಯನ್ನು ವಿವರವಾಗಿ ತಿಳಿದುಕೊಳ್ಳಬೇಕೆಂದಿದೆ. ನನ್ನನ್ನು ಕರುಣಿಸಿ ಕೃತಾರ್ಥನನ್ನಾಗಿ ಮಾಡಿ” ಎಂದನು. ಪರಾಶರ ಮಹರ್ಷಿಯು ಶಿಷ್ಯನ ಅಭಿಮತವನ್ನು ಮನ್ನಿಸಿ ಭೃಗುವಂಶ ಚರಿತ್ರೆಯನ್ನು ಹೇಳತೊಡಗಿದನು.
ವಿಜಯನಗರ ವಾರ್ಡ್ ನಂಬರ್ 20ರಲ್ಲಿ ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.