ಮನೆ ರಾಜಕೀಯ ಕರೋನಾ ಹರಡಿದ್ದು, ಟ್ರಾಫಿಕ್ ಜಾಮ್ ಮಾಡಿದ್ದು ಪಾದಯಾತ್ರೆ ಸಾಧನೆ: ಕಾರಜೋಳ ವ್ಯಂಗ್ಯ

ಕರೋನಾ ಹರಡಿದ್ದು, ಟ್ರಾಫಿಕ್ ಜಾಮ್ ಮಾಡಿದ್ದು ಪಾದಯಾತ್ರೆ ಸಾಧನೆ: ಕಾರಜೋಳ ವ್ಯಂಗ್ಯ

0

ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಮೇಕೆದಾಟು ಯೋಜನೆಯ ಹೆಸರಿನಲ್ಲಿ ನಡೆಸಿದ ಪಾದಯಾತ್ರೆ ಕೇವಲ ಪ್ರಚಾರ ಯಾತ್ರೆ. ಅದೊಂದು ಜನರನ್ನು ಮೋಸಗೊಳಿಸುವ ವಿಫಲ ತಂತ್ರ. ಕಾಂಗ್ರೆಸ್ನವರ ಮೊದಲ ಹಂತದ ಪಾದಯಾತ್ರೆ ಕೇವಲ ಕೋರಾನಾ ಸೋಂಕು ಹರಡುವಿಕೆಯಲ್ಲಿ ಯಶಸ್ವಿಯಾದರೆ ಎರಡನೇ ಹಂತದ ಪಾದಯಾತ್ರೆ ಬೆಂಗಳೂರು ನಗರದಾದ್ಯಂತ ಮತ್ತು ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ ಕಿರಿಕಿಗೆ ಮಾತ್ರ ಸಾಕ್ಷಿಯಾಯಿತು ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಮೇಕೆದಾಟು ಯೋಜನೆ ಸಂಕಲ್ಪದಿಂದ ಸಾಕಾರಗೊಳ್ಳಬೇಕಾದರೆ ಹಾಗೂ ಈ ಯೋಜನೆಯ ಪರಿಣಾಮಕಾರಿ ಅನುಷ್ಟಾನ ಆಗುವುದು ಕೇವಲ ಭಾರತೀಐ ಜನತಾ ಪಕ್ಷ ಮತ್ತು ಅದರ ಸರ್ಕಾರದಿಂದ ಮಾತ್ರ ಸಾಧ್ಯ.

ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಕಾವೇರಿ ಕೊಳ್ಳದ ಜನತೆಗೆ ಈ ವಿಷಯದ ಸತ್ಯ ದರ್ಶನವಾಗಿದೆ.

ಅಧಿಕಾರದಲ್ಲಿದ್ದಾಗ ಯಾವುದೇ ಪರಿಣಾಮಕಾರಿ ಕ್ರಮಕ್ಕೆ ಮುಂದಾಗದೇ ಕಾಲಹರಣ ಮಾಡಿದ ಕಾಂಗ್ರೆಸ್ ಪಕ್ಷ ಇದೀಗ ಮತ್ತೆ ಮತ್ತೆ ಪಾದಯಾತ್ರೆ ಮಾಡುವ ಮೂಲಕ ಜನದ್ರೋಹ ಎಸಗುತ್ತಿದೆ.

ಕಾಂಗ್ರೆಸಿಗರ ಗಿಮಿಕ್ಗೆ ನಾಡಿನ ಜನತೆ ಮೋಸ ಹೋಗುವುದಿಲ್ಲ ಎಂಬ ಸತ್ಯದ ಅರಿವು ಕಾಂಗ್ರೆಸ್ಗೆ ಸಾಕ್ಷಾತ್ಕಾರವಾಗಬೇಕಿದೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನಯುದ್ದಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ನಟ ಸೋನುಸೂದ್
ಮುಂದಿನ ಲೇಖನಇಂದು 2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆ