ಮಂಡ್ಯ: ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೋಟಾರ ವಾಹನ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಸಿ.ಬಸವರಾಜು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ಅರ್ಹತಾ ಪತ್ರ ನವೀಕರಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ಎಸಗುತ್ತಿರುವುದಾಗಿ ಶೇಖರ್ ಮುಖ್ಯಮಂತ್ರಿ ಅವರಿಗೆ ದೂರು ಸಲ್ಲಿಸಿದ್ದಾರೆ.
ವಾಹನಗಳು ಕಚೇರಿಗೆ ಹಾಜರಾಗದೇ ದಿನಕ್ಕೆ 50-100 ವಾಹನಗಳ ಅರ್ಹತ ಪತ್ರ ನವೀಕರಣವಾಗುವುದರ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪರಿಶೀಲನೆ ಸಲುವಾಗಿ ಕೆಲವು ವಾಹನಗಳ ಸಂಖ್ಯೆಯನ್ನು ನೀಡಿದ್ದು, KA 09C 9301, KA 10 7972 ಮತ್ತು KA 55 0871 ವಾಹನವು ಊಟಿಯಲ್ಲಿದ್ದು, ವಾಹನ ಮಾಲೀಕರು ಕೂಡ ಊಟಿಯಲ್ಲಿ ವಾಸವಾಗಿರುತ್ತಾರೆ. ನಿಯಮಗಳನ್ನು ಪಾಲಿಸದೇ ಕಾರ್ಯನಿರ್ವಹಿಸುವುದರಿಂದ ಸದರಿ ವಾಹನಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಯಲ್ಲಿಯೂ ಸಹ ವಂಚನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಸದರಿ ವಾಹನಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡು, , ಕೈಗೊಂಡ ಕ್ರಮದ ಬಗ್ಗೆ ಕಚೇರಿಗೆ ವರದಿ ಸಲ್ಲಿಸಲು ಬೆಂಗಳೂರು ಅಪರ ಸಾರಿಗೆ ಆಯುಕ್ತರು ಸೂಚಿಸಿದ್ದಾರೆ..














