ಮನೆ ಮನರಂಜನೆ ಜೂನ್’ ನಲ್ಲಿ ‘ಕಾಟನ್ ಪೇಟೆ ಗೇಟ್’ ತೆಲುಗು ಕನ್ನಡದಲ್ಲಿ ರಿಲೀಸ್

ಜೂನ್’ ನಲ್ಲಿ ‘ಕಾಟನ್ ಪೇಟೆ ಗೇಟ್’ ತೆಲುಗು ಕನ್ನಡದಲ್ಲಿ ರಿಲೀಸ್

0

ಆರ್. ಎಸ್ ಪ್ರೊಡಕ್ಷನ್ಸ್’ ಬ್ಯಾನರ್’ನಲ್ಲಿ ಆರ್. ಶ್ರೀನಿವಾಸ್ ನಿರ್ಮಾಣದ ಇಪ್ಪತ್ತನೇ ಚಿತ್ರ “ಕಾಟನ್’ಪೇಟೆ ಗೇಟ್’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜೂನ್’ನಲ್ಲಿ ಬಿಡುಗಡೆಯಾಗಲಿದೆ.

Join Our Whatsapp Group

ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕಾಟನ್’ಪೇಟೆ ಗೇಟ್’ ಚಿತ್ರದ ಬಹುಭಾಗ ಚಿತ್ರೀಕರಣ ಬೆಂಗಳೂರು, ಹೈದರಾಬಾದ್ ಸುತ್ತಮುತ್ತ ನಡೆಸಲಾಗಿದೆ. ಸದ್ಯ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ “ಕಾಟನ್’ಪೇಟೆ ಗೇಟ್’ ಚಿತ್ರಕ್ಕೆ ತೆಲುಗಿನಲ್ಲಿ “ಸೀತಣ್ಣಪೇಟಾ ಗೇಟ್’ ಎಂದು ಹೆಸರಿಡಲಾಗಿದ್ದು, ವೈ. ರಾಜಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

“ಕಾಟನ್’ಪೇಟೆ ಗೇಟ್’ ಚಿತ್ರದ ನಾಲ್ಕು ಹಾಡುಗಳಿಗೆ ಎನ್. ಎಸ್ ಪ್ರಸು ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಚಿಡತಾಲ ನವೀನ್ ಹಾಗೂ ಯೋಗಿ ರೆಡ್ಡಿ ಛಾಯಾಗ್ರಹಣ, ಶಿವ ಸರ್ವಣಿ ಸಂಕಲನವಿದೆ. ಚಿತ್ರಕ್ಕೆ ಬಯ್ಯವರಪು ರವಿ ಸಂಭಾಷಣೆ ಬರೆದಿದ್ದಾರೆ.

ವೇಣುಗೋಪಾಲ್, ಯಶ್ವನ್, ಸುರಭಿ ತಿವಾರಿ, ಅನುಶಾ ಜೈನ್, ಸುಧೀಕ್ಷಾ, ಕಿಸ್ಲೆ ಚೌಧರಿ , ಪಾರ್ಥು ಮುಂತಾದವರು “ಕಾಟನ್’ಪೇಟೆ ಗೇಟ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟೀಸರ್ ಇಂದು ಬಿಡುಗಡೆಯಾಗಲಿದೆ.