ಮನೆ ದೇವರ ನಾಮ ಗಜಚರ್ಮಾಂಭರ ಗೌರಿಮಹೇಶಗೆ

ಗಜಚರ್ಮಾಂಭರ ಗೌರಿಮಹೇಶಗೆ

0

ಗಜಚರ್ಮಾಂಭರ ಗೌರಿಮಹೇಶಗೆ

ಬೆಳಗುವೆ ಮಂಗಳದಾರತಿಯ |

ಗಣಪತಿ ಪಿತ ಸತಿ, ಪಾರ್ವತಿ ಪತಿಗೆ |

ಬೆಳಗುವೆ ಮಂಗಳದಾರತಿಯಾ…..

||ಗಜಚರ್ಮಾಂಭರ||

ಶಿವಶಂಕರ ಹರ ವರ ಗಂಗಾಧರ

ನಟವರ ಈಶ್ವರಗೆ |

ರುದ್ರಭಯಂಕರ ಶಿವಅಭಯಂಕರ |

ಗಿರಿಜಾ ವಲ್ಲಭಗೇ……

||ಗಜಚರ್ಮಾಂಭರ||

ದುಷ್ಟರ ಗೆಲಿದು ,ಶಿಷ್ಟರಿಗೊಲಿದು

ತಾಂಡವಗೈದವಗೆ |

ಢಮರುತ್ರಿಶೂಲ ,ಉರಗವಧರಿಸಿದ |

ನಂಜುಡೇಶನಿಗೇ….

||ಗಜಚರ್ಮಾಂಭರ||

ಹಿಂದಿನ ಲೇಖನಮೈಸೂರು: 14 ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ ರದ್ದು
ಮುಂದಿನ ಲೇಖನಭ್ರಮರಿ ಪ್ರಾಣಾಯಾಮ: ನಿಮ್ಮ ಶ್ವಾಸಕೋಶಕ್ಕೆ ಅತಿ ಉತ್ತಮ