ಮೈಸೂರು : ಮೈಸೂರಿನಲ್ಲಿ ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಸಕಲ ಸಿದ್ಧತೆಗಳು ನಡೆದಿವೆ. ದಸರಾ ಆನೆ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ. ಜಂಬೂಸವಾರಿ ಮೆರವಣಿಗೆಯ ಪ್ರಮುಖ ಭಾಗವಾದ ಚಿನ್ನದ ಅಂಬಾರಿ ಅರಮನೆ ಆವರಣದಲ್ಲಿ ಸಿದ್ಧಗೊಂಡಿದೆ.
ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲು ಸಜ್ಜಾಗಿದ್ದಾನೆ. ಅದಕ್ಕೂ ಮುನ್ನ ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿ ಅನಾವರಣ ಆಗಿದೆ. ಆಕರ್ಷಕವಾಗಿ ಚಿನ್ನದ ಅಂಬಾರಿ ನಿರ್ಮಾಣಗೊಂಡಿದೆ.
ಜಂಬೂಸವಾರಿಯಲ್ಲಿ ಭಾಗಿಯಾಗುವ ಸಿಎಂ, ಡಿಸಿಎಂಗೆ ವಿಶೇಷ ಉಡುಗೊರೆ ಸಿದ್ಧ – ಮೈಸೂರು ದಸರಾ ಜಂಬೂಸವಾರಿ 2025ರ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೊಡುವುದಕ್ಕಾಗಿ ಮೈಸೂರಿನ ಕಲಾವಿದ ರಾಜೇಶ್ ಅವರು ಗೆ ವಿಶೇಷ ಉಡುಗೊರೆ ಸಿದ್ದಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ನೀಡಲು ಅವರ ಮನೆದೇವರಾದ ಸಿದ್ದರಾಮೇಶ್ವರನ ಮೂರ್ತಿ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ನೀಡಲು ಕೆಂಕೇರಮ್ಮ ಮೂರ್ತಿಯನ್ನು ಪಂಚಲೋಹದಲ್ಲಿ ನಿರ್ಮಿಸಲಾಗಿದೆ. ಈ ಅಪರೂಪದ ಕಾಣಿಕೆಯು ಕಲಾವಿದ ರಾಜೇಶ್ ಅವರ ಪ್ರೀತಿ ಮತ್ತು ಕಲಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ. ಈ ಹಿಂದೆ ಹೆಚ್ಡಿ ಕುಮಾರಸ್ವಾಮಿ, ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ರಾಜೇಶ್ ಇದೇ ರೀತಿ ಉಡುಗೊರೆಗಳನ್ನು ನೀಡಿದ್ದರು ಎಂದು ತಿಳಿದಿದೆ.














