ಮನೆ ರಾಜ್ಯ ದೇಶದ ಮೊದಲ ಸೌರಶಕ್ತಿ ಆಧಾರಿತ ಇವಿ ಚಾರ್ಜಿಂಗ್ ಹಬ್ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಲೋಕಾರ್ಪಣೆ

ದೇಶದ ಮೊದಲ ಸೌರಶಕ್ತಿ ಆಧಾರಿತ ಇವಿ ಚಾರ್ಜಿಂಗ್ ಹಬ್ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಲೋಕಾರ್ಪಣೆ

0

ಬೆಂಗಳೂರು: ಇಂದು ದೇಶದ ಮೊದಲ ಸೌರಶಕ್ತಿ ಸಂಯೋಜಿತ ಮತ್ತು ಸೆಕೆಂಡ್ ಲೈಫ್ ಬ್ಯಾಟರಿ ವ್ಯವಸ್ಥೆಯೊಂದಿಗೆ ಸಜ್ಜುಗೊಂಡ ಇಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಹಬ್ ಅನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಉದ್ಘಾಟಿಸಲಾಗಿದೆ. ಈ ಅತ್ಯಾಧುನಿಕ ಚಾರ್ಜಿಂಗ್ ಕೇಂದ್ರವನ್ನು ಕರ್ನಾಟಕ ಸರ್ಕಾರದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಲೋಕಾರ್ಪಣೆಗೊಳಿಸಿದರು.

ಈ ವಿಶಿಷ್ಟ ಹಬ್ ಬೆಸ್ಕಾಂ, ಜರ್ಮನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಸಂಸ್ಥೆ ಮತ್ತು ಬೋಷ್ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೃಹತ್ ಇವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. ಏಕಕಾಲದಲ್ಲಿ 18 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಒಟ್ಟು 23 ಚಾರ್ಜಿಂಗ್ ಪಾಯಿಂಟ್‌ಗಳ ಬೃಹತ್ ಚಾರ್ಜಿಂಗ್ ಕೇಂದ್ರವಾಗಿದೆ.

ಸೌರಶಕ್ತಿ ಸಾಮರ್ಥ್ಯ: 45 ಕಿ.ವ್ಯಾ, ಬ್ಯಾಟರಿ ಸಂಗ್ರಹಣ ಸಾಮರ್ಥ್ಯ: 100 ಕಿ.ವ್ಯಾ.ಹೆಚ್ (ಸೆಕೆಂಡ್ ಲೈಫ್ ಲಿಥಿಯಂ ಐಯಾನ್ ಬ್ಯಾಟರಿ). ಈ ಕೇಂದ್ರದಲ್ಲಿ ಒಂದೇ ಸಮಯದಲ್ಲಿ 23 ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದಾಗಿದೆ. ಇಂತಹ ವ್ಯವಸ್ಥೆ ದೇಶದ ಇತರ ನಗರಗಳಿಗೆ ಮಾದರಿಯಾಗಿ ಬಳಕೆಯಾಗುವ ಸಾಧ್ಯತೆ ಇದೆ.

ಉದ್ಘಾಟನೆ ಸಂದರ್ಭ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, “ಇದು ಕೇವಲ ಚಾರ್ಜಿಂಗ್ ಕೇಂದ್ರವಲ್ಲ. ಇದು ಕರ್ನಾಟಕ ಸರ್ಕಾರದ ಇ-ಮೋಬಿಲಿಟಿ, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಉಳಿವಿನ ಬದ್ಧತೆಯ ಪ್ರಣಾಳಿಕೆಗೆ ಸಾಕ್ಷಿಯಾಗಿದೆ. ಇಂತಹ ಹಬ್ ಗಳು ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಕಲ್ಪಿಸಲು ಸಹಾಯ ಮಾಡುತ್ತವೆ.”