ಮನೆ ದೇವರ ನಾಮ ಕಷ್ಟಪಟ್ಟರು ಇಲ್ಲ ಕಳವಳಿಸಿದರು

ಕಷ್ಟಪಟ್ಟರು ಇಲ್ಲ ಕಳವಳಿಸಿದರು

0

ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲ

ಭ್ರಷ್ಟ ಮಾನವ ನಿನ್ನ ಹಣೆಬರೆಹವಲ್ಲದೆ ಇಲ್ಲ ||ಪ||

ಸಿರಿವಂತನ ಸ್ನೇಹವ ಮಾಡಿ ನಡೆದರು ಇಲ್ಲ

ಪರಿಪರಿಯಲಿ ವಿದ್ಯೆಯ ಕಲಿತರಿಲ್ಲ

ನರಿಯ ಬುದ್ಧಿಯಿಂದಲಿ ನಡೆದುಕೊಂಡರು ಇಲ್ಲ

ಅರಿಯದೆ ಹಲವ ಹಂಬಲಿಸಿದರು ಇಲ್ಲ ||1||

ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ

ಕಂಡ ಕಂಡವರಿಗೆ ಕೈ ಮುಗಿದರಿಲ್ಲ

ಗಂಡುಗತ್ತರಿಯನು ಕೊರಳಿಗಿಟ್ಟರು ಇಲ್ಲ

ಪ್ರಚಂಡನಾದರು ಇಲ್ಲ, ಪರಿಹಾಸ್ಯವೆಲ್ಲ ||2||

ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ

ಬೆಟ್ಟವನು ಕಿತ್ತು ತಂದಿಟ್ಟರಿಲ್ಲ

ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ

ಕೊಟ್ಟವರಿಗುಂಟು ಕೊಡದವರಿಗಿಲ್ಲ ||3||

ಹಿಂದಿನ ಲೇಖನಗುಟ್ಕಾ, ತಂಬಾಕು ಉತ್ಪನ್ನಗಳ ನಿಷೇಧ: ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಮುಂದಿನ ಲೇಖನಭುಜ ಹಾಗೂ ಕತ್ತುನೋವಿಗೆ ರಾಮಬಾಣ ಈ ಯೋಗಾಸನಗಳು