ಮನೆ ಸುದ್ದಿ ಜಾಲ ಕೋವಿಡ್-19: 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 636 ಹೊಸ ಸೋಂಕು ಪ್ರಕರಣ: 3 ಸಾವು

ಕೋವಿಡ್-19: 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 636 ಹೊಸ ಸೋಂಕು ಪ್ರಕರಣ: 3 ಸಾವು

0

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 636 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, 3 ಸಾವು ವರದಿಯಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಮಾಹಿತಿ ಅನ್ವಯ ದೇಶದಲ್ಲಿ 24 ಗಂಟೆಗಳಲ್ಲಿ 636 ಹೊಸ ಪ್ರಕರಣಗಳು ದಾಖಲಾಗಿವೆ. ಈ ಹಿಂದಿನ ದಿನ 841 ಸೋಂಕು ಪ್ರಕರಣಗಳು ದಾಖಲಾಗಿತ್ತು. ಈ ಸಂಖ್ಯೆಗೆ ಹೋಲಿಕೆ ಮಾಡಿದರೆ ದೇಶದಲ್ಲಿನ ಹೊಸ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಅಂತೆಯೇ 24 ಗಂಟೆಗಳಲ್ಲಿ 3 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಇಬ್ಬರು ಮತ್ತು ತಮಿಳುನಾಡಿನಲ್ಲಿ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಆ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 5,33,364 ಕ್ಕೆ ತಳ್ಳಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಅಂತೆಯೇ ಕಳೆದ 24 ಗಂಟೆಗಳಲ್ಲಿ 548 ಜನರು ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದು, ದೇಶದಲ್ಲಿ ಒಟ್ಟು ಚೇತರಿಕೆ ಕಂಡವರ ಸಂಖ್ಯೆ 4.44 ಕೋಟಿಗೆ (4,44,76,150) ಏರಿಕೆಯಾಗಿದೆ. ಅಂತೆಯೇ ಈ ಪ್ರಮಾಣ ರಾಷ್ಟ್ರೀಯ ಚೇತರಿಕೆ ದರವನ್ನು 98.81 ಪ್ರತಿಶತಕ್ಕೆ ಏರಿಸಿದೆ. ಸಾವಿನ ಪ್ರಮಾಣವು 1.18 ಪ್ರತಿಶತದಷ್ಟು ದಾಖಲಾಗಿದೆ.

ಭಾನುವಾರ, ಭಾರತವು 841 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿತ್ತು. ಇದು ಕಳೆದ 227 ದಿನಗಳಲ್ಲಿ ಅಥವಾ ಏಳು ತಿಂಗಳುಗಳಲ್ಲಿ ಗರಿಷ್ಠ ದೈನಂದಿನ ಹೆಚ್ಚಳವಾಗಿತ್ತು.