ಮನೆ ಮನರಂಜನೆ ತಮಿಳು ಚಿತ್ರದಲ್ಲಿ ನಟಿಸುತ್ತಿರುವ ಕ್ರಿಕೆಟಿಗ ಶ್ರೀಶಾಂತ್

ತಮಿಳು ಚಿತ್ರದಲ್ಲಿ ನಟಿಸುತ್ತಿರುವ ಕ್ರಿಕೆಟಿಗ ಶ್ರೀಶಾಂತ್

0

ಕ್ರಿಕೆಟ್‌ ಮಾತ್ರವಲ್ಲದೇ ಜಾಹೀರಾತು ಸೇರಿದಂತೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಹೊಂದಿರುವ ಕ್ರಿಕೆಟಿಗ ಶ್ರೀಶಾಂತ್‌ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್​ ಶಿವನ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ಶ್ರೀಶಾಂತ್‌ ಅಭಿನಯಿಸುತ್ತಿದ್ದಾರೆ.

ಇದೇ ಚಿತ್ರದಲ್ಲಿ ವಿಜಯ್‌ ಸೇತುಪತಿ, ಸಮಂತಾ, ನಯನತಾರಾ ನಟಿಸುತ್ತಿರುವುದು ವಿಶೇಷವಾಗಿದೆ.

ಶ್ರೀಶಾಂತ್ ಜನ್ಮದಿನವಾದ ಫೆ.7 ರಂದು ಚಿತ್ರತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿ, ಶ್ರೀಶಾಂತ್​ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿತ್ತು. ಶ್ರೀಶಾಂತ್‌ ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲ ಮೊಹಮ್ಮದ್​ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫೆ. 11ರಂದು ಸಿನಿಮಾದ ಟೀಸರ್​ ಬಿಡುಗಡೆ ಮಾಡುವುದಾಗಿ ವಿಘ್ನೇಶ್​ ಶಿವನ್​ ಹೇಳಿದ್ದಾರೆ.

ಹಿಂದಿನ ಲೇಖನರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ
ಮುಂದಿನ ಲೇಖನರಾಷ್ಟ್ರಧ್ವಜದ ಬಗ್ಗೆ ಅಪಮಾನ ಸರಿಯಲ್ಲ: ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಾಮಂಡಲ