ಕುಷ್ಟಗಿ: ಕ್ರೂಸರ್ ವಾಹನ ಡಿಕ್ಕಿಯಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಬಾಲಕಿ ದುರ್ಮಣಕ್ಕೀಡಾದ ಘಟನೆ ತಾಲೂಕಿನ ಯಲಬುಣಚಿ ಗ್ರಾಮದಲ್ಲಿ ಫೆ. 16ರ ಶುಕ್ರವಾರ ಬೆಳಗ್ಗೆ ನಡೆದಿದೆ.
ಗಜೇಂದ್ರಗಡ ತಾಲೂಕಿನ ಮೆಕ್ಕಲಜರಿ ಗ್ರಾಮದ ಅಂಜಲಿ ಮಲ್ಲಪ್ಪ ಅವಾರಿ(7ವ) ಬಾಲಕಿ ಎಂದು ಗುರುತಿಸಲಾಗಿದೆ.
ತಾಲೂಕಿನ ಯಲಬುಣಚಿ ಸೀಮಾದ ರಸ್ತೆಯ ತೋಟದ ಮನೆಯಿಂದ ಅವರ ಸಂಬಂಧಿಕರ ತೋಟದ ಮನೆಗೆ ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದಳು. ಆ ವೇಳೆ ಅತಿ ವೇಗದಲ್ಲಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ.
ವಾಹನದ ಡಿಕ್ಕಿಯಾದ ರಭಸಕ್ಕೆ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ. ವಾಹನ ಚಾಲಕ ಮಾನವೀಯತೆ ಮರೆತು ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಬಾಲಕಿಗೆ ಡಿಕ್ಕಿ ಹೊಡೆದ ವಾಹನ ಕ್ರೂಸರ್ ವಾಹನ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube