ಮನೆ ಅಪರಾಧ ಮದುವೆ ಮನೆ ಶಾವಿಗೆ ಪಾಯಸ ಸೇವಿಸಿ 30ಕ್ಕೂ ಹೆಚ್ಚು‌ ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮದುವೆ ಮನೆ ಶಾವಿಗೆ ಪಾಯಸ ಸೇವಿಸಿ 30ಕ್ಕೂ ಹೆಚ್ಚು‌ ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

0

ದಾವಣಗೆರೆ(Davanagere): ಮದುವೆ ಮನೆಯ ಶಾವಿಗೆ ಪಾಯಸ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌಡಗೊಂಡನ ಗ್ರಾಮದಲ್ಲಿ ನಡೆದಿದೆ. ‌

ಮದುವೆಗೆ ಆಗಮಿಸಿದ್ದ ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 30 ಜನ ಅಸ್ವಸ್ಥರಾಗಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನೀಡಿದ ಬೆನ್ನಲ್ಲೇ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಮದುವೆ ಮನೆಯಲ್ಲಿ ಊಟ ಮಾಡಿದ ಕೆಲವರು‌ ಭೇದಿ, ವಾಂತಿ,‌ ತಲೆ‌ಸುತ್ತು ಬಂದ ಪರಿಣಾಮ ತಕ್ಷಣವೇ ಎಲ್ಲರನ್ನು ಆಸ್ಪತ್ರೆಗೆ ಸಾಗಿಸಲಾಯಿತು.ಇನ್ನು ತೀವ್ರವಾಗಿ ಅಸ್ವಸ್ಥರಾದ 23 ಜನರನ್ನ ಜಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ ಏಳು ಜನರನ್ನು ಮನೆಗೆ ಕಳುಹಿಸಲಾಗಿದೆ.

‌ಈ ಕುರಿತು ಜಗಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.‌ ಘಟನೆಗೆ ಶಾವಿಗೆ ಪಾಯಸವೇ ಕಾರಣ ಎಂದು ಜಗಳೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಿ.ವಿ.ನೀರಜ್  ತಿಳಿಸಿದ್ದಾರೆ.

ಹಿಂದಿನ ಲೇಖನಬಿಜೆಪಿ ಸೋಲಿಸಲು ಜೆಡಿಎಸ್ ನ್ನು ಕಾಂಗ್ರೆಸ್ ಬೆಂಬಲಿಸಲಿ: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಕಾಂಗ್ರೆಸ್ ಗೆ ಹೊಣೆಗಾರಿಕೆ ಮರೆತು ಹೋಗಿದೆ: ಆರಗ ಜ್ಞಾನೇಂದ್ರ