ಮನೆ ರಾಜಕೀಯ ಕಾವೇರಿ- ಪೆನ್ನಾರ್, ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ

ಕಾವೇರಿ- ಪೆನ್ನಾರ್, ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ

0

ನವದೆಹಲಿ:  ಕಾವೇರಿ –ಪೆನ್ನಾರ್, ಕೃಷ್ಣಾ – ಪೆನ್ನಾರ್  ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ  ಸಮ್ಮತಿಸಿದ್ದು, ಈ ಬಗ್ಗೆ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಇಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸುತ್ತಿದ್ದು,  ಈ ವಿಷಯವನ್ನು ಘೋಷಣೆ ಮಾಡಿದ್ದಾರೆ. ರೈತರ ಕೃಷಿ ಕಾರ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾವೇರಿ-ಪೆನ್ನಾರ್ ನದಿ ಜೋಡಣೆ ಹಾಗೂ ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆಳನ್ನು ಪ್ರಾರಂಭಿಸೋದಾಗಿ ಘೋಷಣೆ ಮಾಡಿದರು.

ಇದಕ್ಕಾಗಿ ಕೇಂದ್ರ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದೆ. ಇದಲ್ಲದೇ 2023ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಸಹ ಘೋಷಣೆ ಮಾಡಲಾಗಿದೆ. ಈ ಮೂಲಕ ರಾಸಾಯನಿಕ ಮುಕ್ತ ಭಾರತ ನಿರ್ಮಾಣಕ್ಕಾಗಿ ಕರೆ ನೀಡಲಾಗಿದೆ.

ಏರ್ ಇಂಡಿಯಾ ಮೇಲಿನ ಬಂಡವಾಳ ಸಂಪೂರ್ಣ ಹಿಂತೆಗೆಯಲಾಗಿದೆ. ಪಿಎಂ ಗತಿ ಶಕ್ತಿ ದೇಶದ ಆರ್ಥಿಕತೆಗೆ ವೇಗ ನೀಗಲಿದೆ. ದೇಶದ ಜಿಡಿಪಿ ಶೇ.9.2ರಷ್ಟು ಬೆಳವಣಿಗೆ. ಸಣ್ಣ ಉದ್ದಿಮೆಗಳಿಗೆ 2023ರ ಮಾರ್ಚ್ ವರೆಗೂ ಕ್ರೆಡಿಟ್ ಸ್ಕೀಂ ವಿಸ್ತರಣೆ. 50 ಸಾವಿರ ರೂ. ನಿಧಿಯ ಮೊತ್ತ 5 ಲಕ್ಷ ಕೋಟಿಗೆ ಹೆಚ್ಚಳ. ಕೌಶಲಾಭಿವೃದ್ಧಿಗೆ ಆನ್ ಲೈನ್ ತರಬೇತಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.