ಮನೆ ಮನರಂಜನೆ ಭಾರೀ ಬೆಲೆಗೆ ‘ಗಾಳಿಪಟ-2’ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟ

ಭಾರೀ ಬೆಲೆಗೆ ‘ಗಾಳಿಪಟ-2’ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟ

0

ಗಾಳಿಪಟ-2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ.

ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಮತ್ತು ದಿಗಂತ್ ನಟನೆಯ ರೊಮ್ಯಾಂಟಿಕ್ ಸಿನಿಮಾ ಗಾಳಿಪಟ-2 ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.

ಈ ವಿಷಯವನ್ನು ಗಾಳಿಪಟ-2 ನಿರ್ಮಾಪಕ ರಮೇಶ್ ರೆಡ್ಡಿ ಅವರೇ ಖಚಿತ ಪಡಿಸಿದ್ದಾರೆ. ಆನಂದ್ ಆಡಿಯೊಗೆ ಮಾರಾಟವಾದ ಸಂಗೀತದ ಹಕ್ಕುಗಳು ಸೇರಿದಂತೆ ಚಿತ್ರವು 8 ಕೋಟಿ ರೂಪಾಯಿಗೂ ಹೆಚ್ಚು ಪ್ರೀ-ರಿಲೀಸ್ ವಹಿವಾಟು ಮಾಡಿದೆ ಎಂದು ಹೇಳಲಾಗುತ್ತದೆ.

ಗಣೇಶ್ ಮತ್ತು ದಿಗಂತ್  ಜೊತೆಗೆ ಹಿರಿಯ ನಟ ಅನಂತ್ ನಾಗ್, ನಿರ್ದೇಶಕ-ನಟ ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಗಾಳಿಪಟ 2 ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಅಧಿಕೃತ ದಿನಾಂಕ ಹೊರ ಬೀಳಲಿದೆ.

ಹಿಂದಿನ ಲೇಖನವಿಮೆಯುಳ್ಳ ವಾಹನವನ್ನು ಓಡಿಸಲು ಪಡೆದ ವ್ಯಕ್ತಿಗೆ ಅಪಘಾತದ ಪರಿಹಾರ ಲಭ್ಯವಿರುವುದಿಲ್ಲ: ಗುವಾಹಟಿ ಹೈಕೋರ್ಟ್‌
ಮುಂದಿನ ಲೇಖನಕಾವೇರಿ- ಪೆನ್ನಾರ್, ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ