ಮನೆ ಸಾಹಿತ್ಯ ನೈಜ ವಿನಮ್ರತಾ ಭಾವವನ್ನು ಬೆಳೆಸಿಕೊಳ್ಳಿ

ನೈಜ ವಿನಮ್ರತಾ ಭಾವವನ್ನು ಬೆಳೆಸಿಕೊಳ್ಳಿ

0

ಸರಾಂತ ಶಸ್ತ್ರಜ್ಞರು ಶಸ್ತ್ರಚಿಕಿತ್ಸೆಗೆಂದು ಆಪರೇಷನ್ ಹೆ. ಥಿಯೇಟರಿಗೆ ಹೋಗುವ ಮುನ್ನ ಪ್ರಾರ್ಥನೆ ಮಾಡಲು ಹೋದರು. ಇದನ್ನು ನೋಡಿ ಅವರ ಸಹಾಯಕ ನರ್ಸ್‌ಗೆ ಅಚ್ಚರಿಯಾಯಿತು. ಆಕೆ “ಶಸ್ತ್ರಚಿಕಿತ್ಸಾಕಾರರು ಕೇವಲ ತಮ್ಮ ಸಾಮರ್ಥ್ಯವನ್ನು ಮಾತ್ರ ಅವಲಂಬಿಸುತ್ತಾರೆ ಎಂದು ಭಾವಿಸಿದ್ದ “ ಎಂದು ಹೇಳಿದಳು.

Join Our Whatsapp Group

 ಪ್ರಶ್ನೆಗಳು

1. ಶಸ್ತ್ರಜ್ಞರ ಉತ್ತರವೇನಾಗಿತ್ತು?

2. ಈ ಕಥೆಯ ನೀತಿಯೇನು?

 ಉತ್ತರಗಳು

1. ಶಸ್ತ್ರಚಿಕಿತ್ಸಕರು ಹೀಗೆಂದು ನುಡಿದರು: “ಶಸ್ತ್ರಚಿಕಿತ್ಸಕ ಕೇವಲ ಒಬ್ಬ ಮನುಷ್ಯನಷ್ಟೆ. ತಾನೇ ಅವನು ಯಾವ ಪವಾಡಗಳನ್ನೂ ಮಾಡಲಾರ. ಮನುಷ್ಯನ ಬುದ್ಧಿ ಹಾಗೂ ಕೌಶಲ್ಯಕ್ಕಿಂತ ಬಲಿಷ್ಟವಾದದ್ದು ಇಲ್ಲದಿದ್ದ ಪಕ್ಷದಲ್ಲಿ ವಿಜ್ಞಾನ ಅಷ್ಟೊಂದು ಪ್ರಗತಿ ಸಾಧಿಸುತ್ತಿರಲಿಲ್ಲವೆಂದು ನನಗೆ ಖಚಿತ. ಪ್ರತಿ ಆಪರೇಷನಾಗೆ

ಮುಂಚೆ ನಾನು ದೇವರ ಸಮೀಪದಲ್ಲಿರುವೆ ಎಂದೂ, ಅವನ ಕೈಗಳು ನನ್ನ ಕೈಗಳಿಗೆ ಮಾರ್ಗದರ್ಶನ ನೀಡುತ್ತವೆಂದು ಭಾವಿಸುತ್ತೇನೆ.”

2. ಡಾ. ಅಲೆಕ್ಸ್ ಕಾರೆಲ್ ಪ್ರಾರ್ಥನೆಯ ಅಪಾರ ಶಕ್ತಿಯ ಬಗ್ಗೆ ತಮ್ಮ ಪುಸ್ತಕ “ಮ್ಯಾನ್, ದಿ ಅನ್ನೋನ್’ನಲ್ಲಿ ವಿವರಿಸುತ್ತಾರೆ. ಅವರು “ಪ್ರಾರ್ಥನೆಯು ಒಬ್ಬ ವ್ಯಕ್ತಿ ಉಂಟುಮಾಡಬಲ್ಲ ಅತ್ಯಂತ ಬಲಿಷ್ಟವಾದ ಶಕ್ತಿ. ಇದು ಭೂಮಿಯ ಗುರುತ್ವಾಕರ್ಷಣೆಯ ಹಾಗೆ ಒಂದು ನೈಜ ಬಲ. ವೈದ್ಯನಾಗಿ ನಾನು ಪ್ರಾರ್ಥನೆಯ ಶಕ್ತಿಯಿಂದ ಸಾವನ್ನು ಜಯಿಸಿರುವ ರೋಗಿಗಳನ್ನು ಕಂಡಿದ್ದೇನೆ. ಅಂತಹವರು ನಿರಂತರ ಪ್ರಾರ್ಥನೆಯ ಮೂಲಕ ದೀರ್ಘಕಾಲೀನ ಖಾಯಿಲೆಗಳಿಂದ ವಾಸಿಯಾಗಿದ್ದಾರೆ. ರೇಡಿಯಂನಂತೆ ಪ್ರಾರ್ಥನೆಯು ಬೆಳಕಿನ ಮೂಲ, ಸ್ವಯಂ ತಾನೇ ಉತ್ಪಾದನೆಯಾಗುವ ಶಕ್ತಿ. ಮೊರೆಹೊಕ್ಕಾಗ ದೊರಕುವ ಎಲ್ಲಾ ಶಕ್ತಿಗಳ ಅನಂತ ಮೂಲ. ನಾವು ಪ್ರಾರ್ಥಿಸಿದಾಗ ವಿಶ್ವದ ಅದಮ್ಯ ಶಕ್ತಿಯೊದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತೇವೆ.