ಕರಿಬೇವಿನ ತವರು ಭಾರತದ ಹಿಮಾಲಯ ಪ್ರದೇಶ. ಇದರಲ್ಲಿ ನಾಲಿಗೆಗೆ ರುಚಿಯನ್ನು ಮತ್ತು ಸೇವಿಸಿದ ಆಹಾರವನ್ನು ಜೀರ್ಣಿಸುವ ಗುಣಗಳು ಇರುವುದರಿಂದ ಸಾರು, ಹುಳಿ,ಮಜ್ಜಿಗೆ,ಪಲ್ಯ, ಉಪ್ಪಿಟ್ಟು ಎಲ್ಲವುಗಳೊಂದಿಗೆ ಬಳಸುತ್ತೇವೆ. ಭಾರತೀಯ ಅಡುಗೆಯಲ್ಲಿ ಕರಿಬೇವಿನ ಪ್ರಧಾನ ಸ್ಥಾನ ಇದು ಕೇವಲ ರುಚಿ,ಸುಗಂಧ ಒದಗಿಸುವ ಎಲೆ ಮಾತ್ರವಲ್ಲ,ದೇಹದಲ್ಲಿ ಸಕ್ಕರೆಯನ್ನು ಹದ್ದುಸ್ತಿಬನಲ್ಲಿಡುವ ಮದ್ದು.ಅಜೀರ್ಣ, ಭೇದಿ, ಮಲಬದ್ಧತೆ, ಯಕೃತ್ ದೋಷ ಪರಿಹರಿಸುವ ವಿರಳೌಷಧ. ಹಿತ್ತಲ ಗಿಡ ಮುದ್ದು ಎನ್ನಲು ಇದೇ ಪುರಾವೆ. ಕರಿಬೇವಿನೆಲೆಯು ನಿಜಕ್ಕೂ ಅಸಂಖ್ಯ ರಾಸಾಯನಿಕ ತತ್ವಗಳನ್ನು ಬಂಡಾರವೇ ಸೈ.ವಿಜ್ಞಾನಿಗಳ ದಂಡು ಮೊಗೆದಷ್ಟು ಸರಕು ಎಲೆಯಲ್ಲಿ ಹುದುಗಿವೆ.ಬೇವು ಕಹಿ, ಆದರೆ ಈ ಬೇವು ಅಷ್ಟು ಕಹಿಯಲ್ಲ. ಸುಗಂಧವೇ ಇದರ ಪ್ರಧಾನ ಗುಣ. ಅನೇಕ ತೈಲಾಂಶ ಒಳಗೊಂಡ ಎಲೆಗೆ ಬಲು ಸುವಾಸನೆ. ಪಳದ್ಯ, ಪುಳಿಯೋಗರೆ ಏನೇ ಅಡುಗೆಯರಲಿ ಕರಿಬೇವಿನಲೆ ಬಿದ್ದರೆ ಘಮಘಮ.
ಕರಿಬೇವಿನೆಲೆಯ ತೈಲಾಂಶ ಬೇರ್ಪಡಿಸಿದರೆ ಅದು ದಟ್ಟ ವಾಸನೆಯ ಎಣ್ಣೆ,ಸುಗಂಧ ಸಾಬೂನು ತಯಾರಿಕೆಯಲ್ಲಿ ಅದು ಉಪಯುಕ್ತ ಬಹುಶಃ ಅಡಿಗೆಗೆ ಎಲೆ ಹಾಕುವುದಕೆ, ತಂಟೆಯೇ ಬೇಡ, ಒಂದೆರಡು ತೊಟ್ಟು ಎಣ್ಣೆ ಹಾಕೋಣ ಎಂಬ ದಿನಗಳನ್ನು ನಾವು ಎದುರು ನೋಡಿದರೆ ಅಚ್ಚರಿ ಯಿಲ್ಲ ಯಾವುದೇ ಖಾದ್ಯ ಕಂಪನಿಗಳು ಈ ದಿಸೆಯಲ್ಲಿನ್ನೂ ಯೋಚಿಸಿಲ್ಲ.ಕರಿಬೇವಿನ ಹಣ್ಣಿನಲ್ಲೂ ತೈಲಾಂಶವಿದೆ ಇದರ ಹಣ್ಣನ್ನು ತಿನ್ನುವರು ಎಲೆ, ಬೇರು, ಕಾಂಡದ ಹೊರ ತೊಗಟೆಯಲ್ಲಿ ಹಸಿವೆ ಉತ್ತೇಜಿಸುವ ಶಕ್ತಿ ಇದೆ ಅದು ಟಾನಿಕೂಡಕ್ಕು ಹೌದು.
ಸಸ್ಯ ವರ್ಣನೆ :
ಕರಿಬೇವಿನ ವೈಜ್ಞಾನಿಕ ಹೆಸರು ಮುರ್ರಯ ಕೊಯಿನಿನಿ, ರೂಟೇಸಿಯೆ ಕುಟುಂಬಕ್ಕೆ ಸೇರುವ ಇದು ಸದಾ ಹಸಿರಾಗಿ ಕಂಗೊಳಿಸುವ ಸುಂದರ ಮರ ಈ ಮರವು ಸಂಯುಕ್ತ ಎಲೆಯನ್ನು ಹೊಂದಿದ್ದು ಸುಗಂಧದಿಂದ ಕೂಡಿರುತ್ತದೆ.ಹೂಗಳು ಗಚ್ಛವಾಗಿ ಬಿಡುತ್ತವೆ ಚಿಕ್ಕವಾದ ದ್ರಾಕ್ಷಿ ಹಣ್ಣಿನ ಬಣ್ಣ ಹೋಲುವ ಹಣ್ಣುಗಳನ್ನು ಬಿಡುತ್ತದೆ ಹಾಗೂ ಈ ಹಣ್ಣುಗಳ ಒಳಗೆ ಒಂದೇ ಬೀಜವಿರುತ್ತದೆ.
ಉಪಯುಕ್ತ ಭಾಗಗಳು :
ಎಲೆ, ಬೇರು, ತೊಗಟೆ, ಮತ್ತು ಹಣ್ಣುಗಳೂ ಸಹ ಉಪಯುಕ್ತ.
ಮಣ್ಣು:
ಕರಿಬೇವನ್ನು ಎಲ್ಲಾ ರೀತಿಯ ಮಣ್ಣುಗಳಲ್ಲಿ ಬೆಳೆಸುವ ಸಾಧ್ಯತೆ ಇದ್ದರೂ ನೀರು ಇಲ್ಲದೆ ಬಸಿದು ಹೋಗುವಂತಹ ಆಳವಾದ ಕೆಂಪು ಮಣ್ಣನ್ನು ಅತ್ಯಂತ ಸೂಕ್ತ.
ಹವಾಗುಣ :
ಇದರ ಬೇಸಾಯಕ್ಕೆ ಒಣಹವೆ ಉತ್ತಮ ನಮ್ಮಲ್ಲಿ ಸಸಿಗಳ ನಾಟಿಗೆ ಮುಂಗಾರು ಸೂಕ್ತ.
ತಳಿಗಳು :
ಈ ಬೆಳೆಯಲ್ಲಿ ನಿಗದಿಪಡಿಸಿದ ತಳಿಗಳಿನ್ನೂ ಬೆಳಕಿಗೆ ಬಂದಿಲ್ಲ.
ಬೇಸಾಯ ಕ್ರಮಗಳು :
ಸಾಮಾನ್ಯವಾಗಿ ಕರಿಬೇವನ್ನು ಬೀಜದಿಂದ ಸಸ್ಯಾಭಿವೃದ್ಧಿ ಮಾಡಲಾಗುವುದು ಚೆನ್ನಾಗಿ ಮಾಾಗಿದ ಹಣ್ಣುಗಳಿಂದ ಬೀಜ ಪಡೆದುಕೊಂಡು ಬಿತ್ತಿದ್ದರೆ ಒಳ್ಳೆಯದು. ಹಣ್ಣುಗಳನ್ನು ಕಿತ್ತು ಬೀಜವನ್ನು ನೀರಿನಲ್ಲಿ ಹಿಚುಕಿ ಬೇರ್ಪಡಿಸಿ, ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಬಿತ್ತಿದ 12ರಿಂದ 15 ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತವೆ. ಬೀಜವನ್ನು ಪಾಲಿಥೀನ್ ಚೀಲಗಳಿಗೆ ತುಂಬಿದ ಮಣ್ಣಿನಲ್ಲಿ ಬಿತ್ತಿ ನಂತರ ಸಸಿಗಳನ್ನು ನಾಟಿ ಮಾಡಿದರೆ ಸಸಿಗಳು ಸುಲಭವಾಗಿ ನೆಲೆಗೊಳ್ಳುತ್ತವೆ. ಸಸಿಗಳನ್ನು ನಾಟಿ ಮಾಡಲು ಒಂದು ಘನ ಮಿ. ಗಾತ್ರದ ಗುಂಡಿಗಳನ್ನು ತೋಡಿ ಒಂದು ತಿಂಗಳ ಕಾಲ ಬಿಸಿಲಿಗೆ ಬಿಟ್ಟು ನಂತರ ಸಮಪ್ರಮಾಣದ ಮೇಲ್ಮಣ್ಣು ಮತ್ತು ಕೊಳೆತ ತಿಪ್ಪೆ ಗೊಬ್ಬರವನ್ನು ತುಂಬಿ ನೀರಿನ ಹಾಯಿಸಬೇಕು.ನಾಟಿಗೆ ಜೂನ್ ಜೂಲೈ ಸಕಾಲ.ಸಸಿಯನ್ನು ನೆಟ್ಟ ಮೇಲೆ ಆಲುಗಾಡದಂತೆ ಆಧಾರ ಕಟ್ಟಬೇಕು.
ಮಳೆಗಾಲ ಪ್ರಾರಂಭವಾಗುವಾಗ ಪ್ರತಿಗಿಡಕ್ಕೆ ಪ್ರತಿ ವರ್ಷ 500 ಗ್ರಾಂ ಹೊಂಗೆ ಹಿಂಡಿ ಒದಗಿಸಬೇಕು. ಆನಂತರ ಪ್ರತಿ ವರ್ಷ ಪ್ರತಿಗಿಡಕ್ಕೆ 10 -20 ಕೆ.ಜಿ.ಕೊಳೆತ ಗೊಬ್ಬರ ಒದಗಿಸಬೇಕು.
ಗಿಡದ ಪ್ರಧಾನ ಕಾಂಡ ನೆಟ್ಟಗಿರುವಂತೆ ನೋಡಿಕೊಂಡು ನೆಲದ ಮಟ್ಟದಿಂದ ಒಂದರಿಂದ 1.5 ಮೀ ಎತ್ತರದವರೆಗೆ ಒಣಗಿದ ಚಿಗುರುಗಳನ್ನು ತೆಗೆಯಬೇಕು.ಮತ್ತು ನಮಗೆ ನಿಲುಕುವ ಮಟ್ಟದಲ್ಲಿ ಸವರತ್ತು ಇರಬೇಕು.
ಕಾಳೆ ಹತೋಟಿ :
ಕಾಳೆ ಬೆಳೆಯದಂತೆ ನಿಗಾ ವಹಿಸಬೇಕು